ಬಂಟ್ವಾಳ: ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಹನುಮಾನ್ ಶಾಖೆ ತುಂಬೆ ಇದರ ವತಿಯಿಂದ 3ನೇ ವರ್ಷದ ಮಣಿಕಂಠ ವಿಜಯ ಎಂಬ ಟ್ಯಾಬ್ಲೋವನ್ನು ಪ್ರದರ್ಶಿಸಲಾಯಿತು. ತುಂಬೆ ಜಂಕ್ಷನ್‍ನಲ್ಲಿ ಹಿಂದೂ ಮುಖಂಡ ಸಂತೋಷ್ ಪೊಳಲಿ ಅವರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಭಜರಂಗದಳದ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು, ಬಂಟ್ವಾಳ ತಾಲೂಕು ಸಂಚಾಲಕ ಪ್ರದೀಪ್ ಅಜ್ಜಿಬೆಟ್ಟು, ಪ್ರಮುಖರಾದ ವಿಜೇತ್ ತುಂಬೆ, ಯತೀಶ್ ಅಮೀನ್ ರಾಮಲ್‍ಕಟ್ಟೆ, ಶಿವಪ್ರಸಾದ್, ಗಣೇಶ್, ಸಂತೋಷ್,ಕಾಶಿನಾಥ್, ರಾಜೇಶ್, ದೀಪಕ್ ಮತ್ತು ಧನರಾಜ್ ಮತ್ತಿತರರು ಉಪಸ್ತಿರಿದ್ದರು.

1

By Suddi9

Leave a Reply

Your email address will not be published. Required fields are marked *