ವಿಟ್ಲ: ಮಾಣಿ ಸೆಪ್ಟಂಬರ್ 6 , ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿನಿಲ ಸೀತಾರಾಮ ಭಟ್‍ರವರು “ ದೇಶದ ಭವಿಷ್ಯ ಮಾನವ ಸಂಪನ್ಮೂಲದ ಮೇಲೆ ನಿಂತಿದೆ. ಅಧ್ಯಾಪಕರು ಮಾನವ ಸಂಪನ್ಮೂಲವನ್ನು ರೂಪಿಸುವವರು” ಎಂದರು. ಶಾಲಾ ಆಡಳಿತಾಧಿಕಾರಿಯಾದ ಸಿ. ಶ್ರೀಧರ್‍ರವರು ಮಾತನಾಡಿ “ಶಿಕ್ಷಕರಿಂದ ಭಾವಿ ಪ್ರಜೆಗಳನ್ನು ಆದರ್ಶಯುತವಾಗಿ ರೂಪಿಸಲು ಸಾಧ್ಯ” ಎಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಕೆ.ಬಾಲಕೃಷ್ಣ ಆಳ್ವರವರು “ ಶಿಕ್ಷಕರು ಡಾ|| ಸರ್ವಪಳ್ಳಿ ರಾಧಾಕೃಷ್ಣನ್ ರವರ ಆದರ್ಶಗಳನ್ನು ಪಾಲಿಸಬೇಕು” ಎಂದರು. ಸಮಾರಂಭದ ಅಧ್ಯಕ್ಷರಾದ ಜೆ.ಪ್ರಹ್ಲಾದ್ ಶೆಟ್ಟಿಯವರು “ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಸೂಚಿಸುವುದು ತಮ್ಮ ನಡತೆಯಿಂದ” ಎಂದು ಹೇಳುತ್ತಾ ಶಿಕ್ಷಕರ ದಿನಾಚರಣೆಯ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷಿ.ವಿ.ಶೆಟ್ಟಿ ಹಾಗೂ ಗ್ರೇಸ್.ಪಿ.ಸಾಲ್ದಾನಾರವರು ಉಪಸ್ಥಿತರಿದ್ದರು.

ಸಭೆಯಲ್ಲಿ ಶಿಕ್ಷಕರು ಜ್ಞಾನದ ಸಂಕೇತವಾದ ಹಣತೆಯನ್ನು ಹಚ್ಚಿ ಡಾ|| ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಗೌರವ ಕಾಣಿಕೆ ಸ್ವೀಕರಿಸಿದರು. ಹಾಗೂ ಇಂದಿನ ಸಭೆಯ ಮುಖ್ಯ ಅತಿಥಿಯಾದ ನಿವೃತ್ತ ಶಿಕ್ಷಕ ಸೀತಾರಾಮ ಭಟ್‍ರವರನ್ನು ಸನ್ಮಾಸಲಾಯಿತು. ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನರಂಜಿಸಿದರು. ವಿದ್ಯಾರ್ಥಿನಿಯರಾದ ಸುರಕ್ಷಾ ಪಿ.ಸ್ ಸ್ವಾಗತಿಸಿ, ಶ್ರವಣ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.
