ಕೈಕಂಬ:ಸಂಸ್ಕಾರ ಶಿಕ್ಷಣಕ್ಕೆ ಹೆಸರುವಾಸಿಯಾದ ಪೊಳಲಿ ರಾಮಕೃಷ್ಣತಪೋವನ ಇಲ್ಲಿ ಗಣೇಶೋತ್ಸವ ಆಚರಣೆಯ ಒಂದು ವಿಶೇಷತೆಯಿದೆ. ಮೂರು ವರ್ಷಗಳ ಹಿಂದೆ ಆಶ್ರಮದ ವಿದ್ಯಾರ್ಥಿಯಾಗಿದ್ದ ಮೌಲಾನ ತನ್ನ ಶ್ರದ್ಧಾ ಭಕ್ತಿ ಹಾಗೂ ಕಲಾತ್ಮಕತೆಯಿಂದ ಆವೆ ಮಣ್ಣಿನ ಪರಿಸರಸ್ನೇಹಿ ಗಣೇಶ ವಿಗ್ರಹವನ್ನು ತಯಾರಿಸಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರ ಗಮನಸೆಳೆದಿದ್ದ. ಅವರು ಇದನ್ನು ಗಮನಿಸಿ ವಿದಿವತ್ತಾದ ಪೂಜೆ,ಪುರಸ್ಕಾರಗಳನ್ನು ಮಾಡುವ ಸಂಕಲ್ಪಕೈಗೊಂಡರು.
6 vp ramakrhishna asrama ganapathi

6 vp parisarasnhi ganapathi

6 vp polali ganapathi
ಧಾರ್ಮಿಕ,ಸಾಂಪ್ರಾದಾಯಿಕ ,ಸಾಂಸ್ಕೃತಿಕ ಹಾಗೂ ಭಜನೆ,ಯೋಗ,ಯಕ್ಷಗಾನ ಇನ್ನಿತರ ಚಟುವಟಿಕೆಯಲ್ಲು ಮುಂದಿದ್ದ ಮೌಲಾನ ಆಶ್ರಮದಲ್ಲಿ ಗಣೇಶನ ಹಬ್ಬಕ್ಕೆ ಮುನ್ನುಡಿ ಸಿಕ್ಕಂತಾಯಿತು. ಈಮಧ್ಯೆ ಮೌಲಾನ ವಿದ್ಯಾರ್ಭಯಾಸವನ್ನು ಮುಗಿಸಿದ್ದು ಸೌಆಮೀಜಿಯವರ ಶಿಪಾರಸಿನ ಮೇರೆಗೆ ಬೆಂಗಳೂರಿನ ಉಷಾಆರ್ಮರ್ ಫ್ರೆ.ಲಿ. ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದ ಮೌಲಾನ ಗಣೇಶ ಹಬ್ಬದ ಸಲುವಾಗಿ ಆಶ್ರಮಕ್ಕೆ ಬಂದು ಎಂದಿನಂತೆ ಗಣೇಶ ವಿಗ್ರಹವನ್ನು ಸಿದ್ದಪಡಿಸಿ ಆಶ್ರಮದ ಚೌತಿಹಬ್ಬಕ್ಕೆ ಚ್ಯುತಿಬರದಂತೆ ಶ್ರದ್ಧೆಯಿಂದ ಕರ್ತವ್ಯನಿರ್ವಹಿಸಿದ ಇದು ಸತತ ಮೂರು ವರ್ಷಗಳಿಂದಲು ಮೌಲಾನ ಗಣೇಶ ವಿಗ್ರಹವನ್ನು ಸಿದ್ದಪಡಿಸಿರುವ ಬಗ್ಗೆ ಆತನಲ್ಲಿ ಭಕ್ತಿ ಹಾಗೂ ಭಾವುಕತೆ ಕಂಡುಬರುತ್ತದೆ ಆಶ್ರಮದಲ್ಲಿನ ಚೌತಿಹಬ್ಬಕ್ಕೆ ಆಶ್ರಮದ ಮಕ್ಕಳು ಆಸ್ರಮದ ಭಕ್ತರು ಮಾತ್ರವಲ್ಲದೆ ಸ್ಥಳೀಯರು ಪಾಲ್ಗೊಂಡು ಸಾಂಪ್ರಾದಾಯಿಕ ವಿಧಿಯಂತೆ ಪರಿಸರಸ್ನೇಹಿ ಗಣೇಶ ವಿಗ್ರಹವನ್ನು ಆಶ್ರಮದ ಬಾವಿಯಲ್ಲಿ ವಿಸರ್ಜಿಸಲಾಗುವುದು.

By suddi9

Leave a Reply

Your email address will not be published. Required fields are marked *