ಮುಂಬಯಿ: ಜಿ.ಎಸ್.ಬಿ. ಮಂಡಲ ಡೊಂಬಿವಲಿ ಕಲ್ಯಾಣ ವತಿಯಿಂದ 5ನೇ ವರ್ಷದ ಸಾಮೂಹಿಕ ಚೂಡಿ ಪೂಜೆ ಹಾಗೂ ಶ್ರೀಸತ್ಯನಾರಾಯಣ ಪೂಜೆಯು ಇತ್ತೀಚೆಗೆ ಕಲ್ಯಾಣ ಪಶ್ಚಿಮದಲ್ಲಿರುವ ಮಹಾವೀರ ಹಾಲ್‍ನಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ಸಮಾಜದ ಮಹಿಳೆಯರು ತುಂಬಾ ಸಂಖ್ಯೆಯಲ್ಲಿ ಭಾಗವಹಿಸಿ ತಾವು ತಂದ ಚೂಡಿಯನ್ನು ತುಳಿನೆಗೆ ಇಲಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ತದನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ ಮಹಾಮಂಗಳಾರತಿ ಮತ್ತು ಸಮಾರಾಧನೆ ನಡೆಯಿತು. ಈ ಸಂದರ್ಭದಲ್ಲಿ ಮಂಡಳದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸಮಾಜ ಬಾಂದವರು ಪೂಜೆಯಲ್ಲಿ ಪಾಲ್ಗೊಂಡರು.

