ಬಜಪೆ: ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ತಂಡಗಳು ರಾಜ್ಯ ಮಟ್ಟದ ಪದವಿಪೂರ್ವ ಹಂತದ ವಿ ಜ್ಙಾನ ಮಾದರಿ ಪ್ರಾತ್ಯ್ಕಕಿಕೆ – “ಟೆಕ್ನೋ ಸ್ಪಾರ್ಕ್- 2016 ರಲ್ಲಿ ಕ್ರಮವಾಣಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕೆಂಜಾರು ಶ್ರೀ ದೇವಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಶನಿವಾರ ರಾಜ್ಯಮಟ್ಟದ ವಿಜ್ಙಾನ ಮಾದರಿ ಪ್ರಾತ್ಯ್ಕಕಿಕೆ -ಸ್ಪರ್ಧೆ “ಟೆಕ್ನೋ ಸ್ಪಾರ್ಕ್- 2016 ರಲ್ಲಿ 42 ಕಾಲೇಜು ತಂಡಗಳು ವಿಭಿನ್ನ ವಿಜ್ಙಾನ ಮಾದರಿಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸ್ಪರ್ಥೆಯಲ್ಲಿ ಮಂಗಳೂರು ಕುಳಾಯಿ ಎಂ.ಡಿ.ಎಸ್. ಕಾಲೇಜು ತಂಡ ತೃತೀಯ ಬಹುಮಾನ ಗಳಿಸಿದೆ. ವಿಜೇತರಿಗೆ ಸ್ಮರಣಿಕೆ ಹಾಗೂ ಅರ್ಹತಾ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.
ವೈಜ್ಙಾ ನಿಕ ಅನ್ವೇಷಣೆಗಳು ದೇಶದ ಅಭ್ಯುದಯಕ್ಕೆಪೂರಕವಾಗಬೇಕು:
ವೈಜ್ಙಾನಿಕವಾಗಿ ಪ್ರತಿನಿತ್ಯ ವಿನೂತನ ಅನ್ವೇಷಣೆಗಳು ಜಗತ್ತಿಗೆ ಪರಿಚಿತವಾಗುತ್ತಲೇ ಇವೆ ಅವು ದೇಶದ ಅಭ್ಯುದಯಕ್ಕೆ ಪೂರಕವಾಗಲೇಬೇಕೆಂಬ ದ್ಯೇಯವಿದ್ದಾಗ ಸಕಾರಾತ್ಮ ಬೆಳವಣಿಗೆಗಳು ಸಾಧ್ಯ ಯುವ ವಿದ್ಯಾರ್ಥಿಗಳಲ್ಲಿ ಹೊಸತನದ ತುಡಿತವಿರುವಾಗ ಯಾವುದೂ ಅಸಾಧ್ಯವೇನಲ್ಲ.ಇಂಧನ ಪರ್ಯಾಯ ಇಂಧನವಾಗಿ ಸೋಲಾರ್ ಬಳಕೆ ,ಶಕ್ತಿಯ ನಾನಾ ಮೂಲಗಳ ವಿಭಿನ್ನ ಬಳಕೆ ತಾಂತ್ರಿಕ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿನ ಶರವೇಗದ ಬೆಳವಣಿಗೆ ಇನ್ನಿತರ ವಿಚಾರಗಳ ಕುರಿತಾದ ವಿಧ್ಯಾರ್ಥಿಗಳಲ್ಲಿನ ಪರಿಕಲ್ಪನೆಗಳು , ಹೊಸತನದ ಅಲೋಚನೆಗಳು ನಿಜಕ್ಕೂ ಅದ್ಭುತ ಎಂದು ಮಹೇಶ್ ಪಿಯು ಕಾಲೇಜುನ ಪ್ರಿನ್ಸಿಪಾಲ್ ಡಾ.ಅಜಿತ್ ಡಿ.ಸೋಜಾ ಅವರು ವಿದ್ಯಾರ್ಥಿಗಳ ವಿಜ್ಙಾನ ಮಾದರಿ ಪ್ರಾತ್ಯಾಕ್ಷಿಕ ವೀಕ್ಷಿಸಿದ ಬಳಿಕ ವಿಜೇತರಿಗೆ ಬಹುಮಾನ ವಿತರಿಸಿ ದಿಕ್ಸೂಚಿ ಭಾಷಣ ಮಾಡಿದರು. ಶ್ರೀ ದೇವಿ ಎಜುಕೇಷನ್ ಟ್ರಸ್ಟ್ ನಿರ್ದೇಶಕ ಕೆ.ಇ .ಪ್ರಕಾಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ” ವಿದ್ಯಾರ್ಥಿಗಳಲ್ಲಿನ ಅನ್ವೇಷನೆ ಮನೊಭಾವನೆಗೆ ತಕ್ಕಂತೆ ವೇದಿಕೆ ಕಲ್ಪಿಸಿದಾಗ ಪ್ರತಿಭೆಗಳು ಹೊರಹೊಮ್ಮನಲು ಸಾಧ್ಯ ಲಭ್ಯ ಸಂಪನ್ಮೂಲಗಳು ನಶಿಸದಂತೆ ಜಾಣತನದ ಸದ್ಬಳಕೆ ನಡೆಸುವುದು ಅಷ್ಟೇ ಮುಖ್ಯ ” ಎಂದರು.ಕಾಲೇಜಿನ ಪ್ರಿನ್ಸಿಪಾಲ್ ಡಾ. ದಿಲೀಪ್ ಕುಮಾರ್ ಕೆ. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾಲೇಜಿನ ಟ್ರಸ್ಟಿ ಪ್ರೀಯಾಂಕ ಎನ್.ಶೆಟ್ಟಿ, ಕಾಲೇಜಿನ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ.ವಿಜಯ ಡಿ.ಪಿ ಆಳ್ವ ಅವರು ಉಪಸ್ಥಿತರಿದ್ದರು. ಸಯ್ಯದ್ ಮಹಮ್ಮದ್ ಇರ್ಶಾದ್ ಸ್ವಾಗತಿಸಿದರು. ಸಂಚಿತಾ ಪ್ರಾರ್ಥಿಸಿದರು ಜಸ್ಟನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.



