ಬಜಪೆ: ಮುಂಡಾಲ ಸಮಾಜ ಗುರುಪುರ-ಕೈಕಂಬ ಇದರ ಆಶ್ರಯದಲ್ಲಿ ‘ಆಟಿದ ಕೂಟದ’ ಕಾರ್ಯಕ್ರಮ ಜು.31 ಭಾನುವಾರ ಬೆಳಿಗ್ಗೆ 8.30ರಿಂದ ಕಂದಾವರ ಡಾ|ಬಿ.ಆರ್ ಅಂಬೇಡ್ಕರ್ ಸಮಾಜ ಮಂದಿರದ ವಠಾರದಲ್ಲಿ ನಡೆಯಲಿದೆ. ‘ಆಟಿ ಕೂಟದ ಮಹತ್ವ’ದ ಕುರಿತು ಮೋನಪ್ಪ ಅದ್ಯಪಾಡಿ ಅವರು ಮಾಹಿತಿ ನೀಡಲಿದ್ದು ಇದೇ ಸಂದರ್ಭ ಆಯೋಜಿಸಲಾದ ಕಾನೂನು ಮಾಹಿತಿ ಶಿಬಿರದಲ್ಲಿ ಬಜಪೆ ಪೋಲೀಸ್ ಠಾಣೆಯ ಉಪನಿರೀಕ್ಷಕ ರಮೇಶ್ ಹಾನಾಪುರ ಅವರು ಕಾನೂನು ಮಾಹಿತಿ ನೀಡಲಿದ್ದಾರೆ. ಕಂದಾವರ ಗ್ರಾ.ಪಂ ಅಧ್ಯಕ್ಷೆ ವಿಜಯಾಗೋಪಾಲ್ ಸುವರ್ಣ ಅವರು ಅಧ್ಯಕ್ಷತೆ ವಹಿಸುವರು. ವೈಯುಕ್ತಿಕ ಹಾಗೂ ಗುಂಪು ಸ್ಪರ್ಧೆಗಳು, ಬಹುಮಾನ ವಿತರಣೆ ಮನೋರಂಜನಾ ಕಾರ್ಯಕ್ರಮ, ಹಗ್ಗಜಗ್ಗಾಟ ಸ್ಪರ್ಧೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
