ಉಳ್ಳಾಲ. ದೇಶ ಪ್ರೇಮ ಎಂಬುವುದು ಮುಸ್ಲಮಾನನ ಒಂದು ಅಂಶ. ನೈಜ್ಯ ಮುಸ್ಲಮಾನ ಅತ ಹುಟ್ಟಿ ಬೆಳೆದ ದೇಶಕ್ಕೆ ಅಪಪ್ರಚಾರಪಡಿಸಲು ಸಾಧ್ಯವೇ ಇಲ್ಲ ಎಂದು ಮಂಗಳೂರು ನಗರಾಭಿವೃದ್ಧಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಅಭಿಪ್ರಾಯಪಟ್ಟರು.
ಅವರು ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ದೇರಳಕಟ್ಟೆಯಲ್ಲಿ 70ನೇ ಸ್ವಾತಂತ್ರ್ಯೋತ್ವದ ಪ್ರಯುಕ್ತ ಅಯೋಜಿಸಿದ ಫ್ರೀಡಂ ಸ್ಕ್ವೇರ್ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
freedom suqure 05

freedom suqure 01

freedom suqure 02

freedom suqure 03

freedom suqure 04
ದೇಶದ ರಕ್ಷಣೆಗೆ ಬಂದಾಗ ಎಲ್ಲಾ ಮುಸ್ಲಮಾನರು ಸಿದ್ಧರಾಗುತ್ತರೆ. ಮುಸ್ಲಮಾನರು ಪಕ ದೇಶ ಪೇಮಿಗಳು ಈ ಬಗ್ಗೆ ಯಾರಿಗು ಸಂಶಯ ಬೇಡ ಎಂದು ಹೇಳಿದರು.
ಶಂಶುಲ್ ಉಲಮಾ ದಾರುಸ್ಸಲಾಂ ಅರೆಬಿಕ್ ಕಾಲೇಜಿನ ಅಧ್ಯಕ್ಷ ಸಯ್ಯದ್ ಹಮೀರ್ ತಂಙಳ್ ಕಿನ್ಯಾ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದದರು.
ದೇರಳಕಟ್ಟೆ ಕೇಂದ್ರ ಜುಮಾ ಮಸೀದಿ ಖತೀಬ್ ಆಶ್ರಫ್ ರಹ್ಮಾನಿ ಚೌಕಿ ಮತ್ತು ಶಂಶುಲ್ ಉಲಮಾ ಕಾಲೇಜ್ ವಿದ್ಯಾರ್ಥಿ ಅಹ್ಮದ್ ನಹೀಂ ತೋಡಾರ್ ಸ್ವಾತಂತ್ರ್ಯೋತ್ವದ ಸಂದೇಶ ಭಾಷಣ ಮಾಡಿದರು.
ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್‍ಮೆಂಟ್ ಅಧ್ಯಕ್ಷ ಹಾಜಿ ಮೊೈದಿನ್ ಕುಂಞ ಮಾರಾಠಿಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮಂಗಳೂರು ನಗರಾಭಿವೃದ್ಧಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಎಮ್.ಟಿ ಮುಹಮ್ಮದ್ ಮೋನು, ಮುಲ್ಕಿ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ, ಕಾಂಗ್ರೆಸ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಪದ್ಮನಾಭ ನರಿಂಗಾನ, ವಿದ್ಯಾರತ್ನ ವಿದ್ಯಾಸಂಸ್ಥೆಯ ನಿರ್ದೇಶಕ ಕೆ.ರವಿಂದ್ರ ಶೆಟ್ಟಿ ಉಳಿದೊಟ್ಟು, ದೇರಳಕಟ್ಟೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಉಪಾಧ್ಯಕ್ಷ ಇಲ್ಯಾಸ್ ಹಾಜಿ, ದ.ಕ ಜಿಲ್ಲಾ ಕೆಡಿಪಿ ಸದಸ್ಯ ಆಲ್ವಿನ್ ಡಿ’ಸೋಜಾ, ಇಬ್ರಾಹೀಂ ಬಾಖವಿ ಕೆ.ಸಿರೋಡ್, ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷ ಕಾಸಿಂ ದಾರಿಮಿ ಕಿನ್ಯಾ, ಜಂ.ಇಯ್ಯತುಲ್ ಮುಅಲ್ಲಿಮೀನ್ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಬಿ.ಎಂ ಸತ್ತಾರ್, ಎಸ್ಕೆಎಸ್ಸೆಸ್ಸೆಫ್ ನಾಯಕರಾದ ಅಬೂಬಕ್ಕರ್ ಹಾಜಿ ಸ್ವಾಗತ್, ಎಂ.ಎ ಅಬ್ದುಲ್ಲಾ, ಸಿತಾರ್ ಮಜೀದ್ ಹಾಜಿ, ಸೈಂiÀiದಾಲಿ ದೇರಳಕಟ್ಟೆ, ನಝೀರ್ ಉಳ್ಳಾಲ್, ಇಬ್ರಾಹೀಂ ಬದ್ಯಾರ್, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಘಟಕಾಧ್ಯಕ್ಷ ನೌಫಲ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯಾಧ್ಯಕ್ಷ ಇಬ್ರಾಹೀಂ ಕೊಣಾಜೆ ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ಪ್ರ.ಕಾರ್ಯದರ್ಶಿ ಮುಸ್ತಫ ಫೈಝಿ ಕಿನ್ಯಾ ವಂದಿಸಿದರು.

By suddi9

Leave a Reply

Your email address will not be published. Required fields are marked *