ಉಳ್ಳಾಲ:ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಹಾಗು ಎಸ್ ಎಸ್ ಎಫ್ ಮೇಲಂಗಡಿ ಶಾಖೆ ಜಂಟಿ ಆಶ್ರಯದಲ್ಲಿ ಶಾಖಾಧ್ಯಕ್ಷ ಅಬ್ದುಸ್ಸಮದ್ ರವರ ನೇತ್ರತ್ವದಲ್ಲಿ ಮೇಲಂಗಡಿ ಫಿರ್ದೌಸ್ ಅಪಾರ್ಟ್ ಮೆಂಟ್ ವರಾಂಡದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.ಉಸ್ಮಾನ್ ಸಖಾಫಿ ದುವಾ ನೆರವೇರಿಸಿದರು.ನವಾಝ್ ಸಖಾಫಿ ಉಳ್ಳಾಲ ಉದ್ಘಾಟಿಸಿದರು.
ಎಸ್ ಎಸ್ ಎಫ್ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ನಯೀಮಿ ಹಾವೇರಿ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು.ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಧ್ವಜಾರೋಹಣ ಮಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ರಿಲೀಫ್ ಚೇರಮಾನ್ ಮನ್ಸೂರ್ ಹಳೆಕೋಟೆ,ಉಳ್ಳಾಲ ದರ್ಗಾ ಸಮಿತಿ ಅಬ್ದುಲ್ ಅಝೀಝ್ ಕೋಡಿ,ಸತ್ತಾರ್ ಮೇಲಂಗಡಿ,ಅಬ್ದುಲ್ ಘನಿ,ನವಾಝ್ ಮೇಲಂಗಡಿ,ತಶ್ರೀಫ್ ಹಾಗೂ ಎಸ್ ಎಸ್ ಎಫ್ ಉಳ್ಳಾಲ ಕಾರ್ಯಕರ್ತರು ಭಾಗವಹಿಸಿದರು.
