ಉಳ್ಳಾಲ: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆಂಟರ್ಪೋರ್ ಪ್ರೋಪೆಷನಲ್ ಆ್ಯಂಡ್ ಆರ್ಗನೈಷೇಶನಲ್ ಡೆವಲಪ್ಮೆಂಟ್ ಘಟಕದ ಆಶ್ರಯದಲ್ಲಿ ವತಿಯಿಂದ ಒಂದು ದಿವಸದ ಬೋಧಕ ಸಿಬ್ಬಂದಿ ವರ್ಗದವರಿಗೆ ಬೋಧನಾ ಕೌಶಲ್ಯ ತರಬೇತಿ ಹಮ್ಮಿಕೊಳ್ಳಲಾಗಿತ್ತು.ಅಬೇಲಿಯನ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ ನಿಜಾಮ್ ಎ.ಪಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, “ಆರ್ಗನೈಸಿಂಗ್ ಆ್ಯಂಡ್ ಲರ್ನಿಂಗ್” ಮತ್ತು ಲರ್ನಿಂಗ್ ಫೋರ್ ಟೀಚಿಂಗ್” ಎಂಬ ವಿಷಯದಲ್ಲಿ ತರಬೇತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ| ಅಬ್ದುಲ್ ಷರೀಫ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ, ಬೋಧಕರು ಮತ್ತು ಶಿಕ್ಷಣ ತಜ್ಞರು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ನಿರತರಾಗಬೇಕಾದ ಅಗತ್ಯತೆಯ ಬಗ್ಗೆ ವಿವರಿಸಿದರು. ಉಪಪ್ರಾಂಶುಪಾಲರಾದ ಡಾ| ರಮೀಝ್ ಎಂ.ಕೆ. ಉಪಸ್ಥಿತರಿದ್ದರು, ಪ್ರೋ . ಹಬೀಬ್ ಸ್ವಾಗತಿಸಿ, ಪ್ರೊ. ಸರ್ಫರಾಜ್ ಹಾಶಿಂ ಜೆ. ಕಾರ್ಯಕ್ರಮದ ಪೀಠಿಕಾ ಭಾಷಣ ಮಾಡಿದರು. ಪ್ರೊ. ಶೀತಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ರಶಲ್ ಸರ್ಕಾರ್ ಧನ್ಯವಾದ ಸಮರ್ಪಿಸಿದರು.
