ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ನಾರಾಯಣ ಶೆಟ್ಟೆಯವರು ನೆರವೇರಿಸಿದರು . ಬಳಿಕ ಭಾರತದ ಭೂಪಟಕ್ಕೆ ಪುಷ್ಪ ಸಮರ್ಪಿಸುವುದರ ಮೂ¯ಕ ಸಭಾ ಕಾರ್ಯಕ್ರಮ ಆರಂಭಿಸಲಾಯಿತು. ಮುಖ್ಯ ಅತಿಥಿಯಾದ ಕೆ.ಬಾಲಕೃಷ್ಣ ಆಳ್ವರವರು ಮಾತನಾಡಿ “ ಸಮಾಜ ವಿರೋಧಿ ಚಟುವಟಿಕೆಗಳು ನಡೆಯುವಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ.” ಎಂದರು. ಶಾಲಾ ಆಡಳಿತಾಧಿಕಾರಿಯಾದ ಸಿ. ಶ್ರೀಧರ್‍ರವರು ಮಾತನಾಡಿ “ಭಾರತ ಮುಂದಿನ ದಿನಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಅತೀ ಅಗತ್ಯ.” ಎಂದರು.
ಸಮಾರಂಭದ ಅಧ್ಯಕ್ಷರಾದ ಪ್ರಹ್ಲಾದ್. ಜೆ. ಶೆಟ್ಟಿ ಮಾತಾನಾಡಿ, “ವಿದ್ಯಾರ್ಥಿಗಳು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು , ಸ್ವಾವಲಂಬಿಗಳಾಗಿ ಬದುಕುವುದೇ ಈ ದೇಶಕ್ಕೆ ನೀಡುವ ಕೊಡುಗೆ” ಎಂದರು. ನಂತರ ವಿವಿಧ ಕ್ರೀಡಾ ಸ್ವರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ನಾರಾಯಣ ಶೆಟ್ಟಿ, ಮುಖ್ಯೋಪಾಧ್ಯಾಯಿನಿಂiÀiರಾದ ವಿಜಯಲಕ್ಷ್ಮೀ .ವಿ. ಶೆಟ್ಟಿ ಹಾಗೂ ಗ್ರೇಸ್.ಪಿ.ಸಲ್ದಾನಾರವರು ಉಪಸ್ಠಿತರಿದ್ದರು. ನಂತರ ವಿದ್ಯಾರ್ಥಿಗಳು ವಿವಿಧ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಅಮಿತಾ ಸ್ವಾಗತಿಸಿ, ಭಾವನಾ ಪೆರಾಜೆ ವಂದಿಸಿದರು, ಶ್ರೀಲಕ್ಷ್ಮೀ.ಕೆ. ಕಾರ್ಯಕ್ರಮ ನಿರ್ವಹಿಸಿದರು.


