ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ನಿತ್ಯಾನಂದ ಸ್ವಾಮಿ ಕಲಾ ಮಂಟಪದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸಹಯೋಗದೊಂದಿಗೆ ಚಿನ್ನದ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಮತ್ತು ತುಳು ನಾಟಕೋತ್ಸವ ಸಮಿತಿ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆದ ತುಳು ನಾಟಕ ಸ್ಪರ್ಧೆಗೆ ಭಾನುವಾರ ರಾತ್ರಿ ವರ್ಣ ರಂಜಿತ ತೆರೆ ಬಿತ್ತು. ಈ ಸ್ಪರ್ಧೆಯಲ್ಲಿ ಹಿರಿಯ ಕಲಾವಿದ, ಚಾ ಪರ್ಕ ತಂಡದ ರಮಾ ಬಿ.ಸಿ.ರೋಡ್ ಇವರ ನಿರ್ದೇಶನದ ರಾಜಶ್ರೀ ಮೋಕೆದ ಅರುಣಾ ಕಲಾವಿದೆರ್ ಪೊಳಲಿ ಇವರ ‘ಆಯಿಲೆಕ್ಕಾಪುಂಡು’

ಚಾ ಪರ್ಕ ತಂಡದ ಇನ್ನೋರ್ವ ಕಲಾವಿದ ತಿಮ್ಮಪ್ಪ ಕುಲಾಲ್ ಬಿ.ಸಿ.ರೋಡ್ ನಿರ್ದೇಶನದ ಫರಂಗಿಪೇಟೆ ಮಾನಸ ಕಲಾವಿದೆರ್ ತಂಡದ ನಮ್ಮ ಕತೆ ದಾದ? ನಾಟಕ ದ್ವಿತೀಯ ಸ್ಥಾನ ಪಡೆದರೆ, ಈ ಹಿಂದೆ ವಿವಿಧ ವೃತ್ತಿಪರ ತಂಡದಲ್ಲಿ ಕಲಾವಿದರಾಗಿದ್ದ ರಾಜೇಶ್ ಬಂಟ್ವಾಳ ಅವರ ನಿರ್ದೇಶನದ ನಾವೂರ ಕಲಾನಿಧಿ ಕಲಾವಿದೆರ್ ಯುವಕ ಮಂಡಳದ ‘ಗೊತ್ತಾನಗ ಪೊರ್ತಾಂಡ್’ ನಾಟಕ ತ್ರಿತೀಯಾ ಸ್ಥಾನ ಪಡೆದಿದೆ.
ಉತ್ತಮ ನಾಯಕ ನಟರಾಗಿ ತಿಮ್ಮಪ್ಪ ಕುಲಾಲ್, ಹರೀಶ್ ಪಡು, ಉತ್ತಮ ನಾಯಕಿ ನಟಿಯಾಗಿ ವಿಶ್ವನಾಥ್ ರಾವ್, ಸುರೇಶ್ ಸರಪಾಡಿ, ಉತ್ತಮ ಖಳ ನಾಯಕನಾಗಿ ಎಚ್.ಕೆ.ನಯನಾಡು, ಸುರೇಶ್ ಕುಲಾಲ್, ಉತ್ತಮ ಖಳ ನಾಯಕಿಯಾಗಿ ಉಷಾ ದೇವರಾಜ್, ಕೇಶವ ಸರಪಾಡಿ, ಉತ್ತಮ ಹಾಸ್ಯ ನಟರಾಗಿ ಚಂದ್ರಹಾಸ ಮಾಣಿ, ಅರುಣ್‍ಚಂದ್ರ ಬಿ.ಸಿ.ರೋಡ್, ಸಂದೀಪ್ ಶೆಟ್ಟಿ, ಉತ್ತಮ ಹಾಸ್ಯ ನಟಿಯಾಗಿ ಅಕ್ಷಯ, ಹರೀಶ ಆಳದ ಪದವು, ಪೋಷಕ ನಟರಾಗಿ ಚಿ.ರಮೇಶ್ ಕಲ್ಲಡ್ಕ, ರಾಜೇಶ್ ಬಂಟ್ವಾಳ ವೈಯಕ್ತಿಕ ಬಹುಮಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದ ನಳೀನ್ ಕುಮಾರ್ ಕಟೀಲ್ ವಹಿಸಿದ್ದರು. ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ತುಳು ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್, ನಾಟಕ ಕಲಾವಿದರಾದ ದೇವದಾಸ್ ಕಾಫಿಕಾಡ್, ಅರವಿಂದ ಬೋಳಾರ್, ಸಮಿತಿ ಗೌರವಾಧ್ಯಕ್ಷ ಸುದರ್ಶನ್ ಜೈನ್, ಅಧ್ಯಕ್ಷ ಸುಭಾಷ್‍ಚಂದ್ರ ಜೈನ್, ಪ್ರಧಾನ ಸಂಚಾಲಕ ಮೋಹನದಾಸ್ ಕೊಟ್ಟಾರಿ, ಸಮಿತಿ ಉಪಾಧ್ಯಕ್ಷ ಗಣೇಶ್ ಶೈಣೈ ಮೊದಲಾದವರು ಉಪಸ್ಥಿತರಿದ್ದರು.
ಈ ಬಾರಿ ನಾಟಕೋತ್ಸವದಲ್ಲಿ ವೃತ್ತಿಪರ ತಂಡದ ಕಲಾವಿದರೇ ತೀರ್ಪುಗಾರರಾಗಿದ್ದು, ಜಿಲ್ಲೆಯ ವೃತ್ತಿಪರ ಕಲಾವಿದರೇ ಕೆಲವು ನಾಟಕ ತಂಡದಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವುದರಿಂದ ತಾಲೂಕಿನ ಯುವ ನಾಟಕ ಕಲಾವಿದರು ಗೌಣಾಗಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

