ಬಂಟ್ವಾಳ: ವಿವಿಧ ಭಾಷೆ , ಹಲವಾರು ಜಾತಿ ಧರ್ಮದ ಜನರು ನೆಲಸಿರುವ ಈ ದೇಶದಲ್ಲಿ ಪ್ರತಿಯೋಬ್ಬ ನಾಗರಿಕನಿಗೂ ನಾನು ಭಾರತೀಯ ಎನ್ನುವ ಭಾವನೆ ಬಂದಾಗ ಮಾತ್ರ ನಮ್ಮ ಸ್ವಾತಂತ್ರ್ಯ ಆಚರಣೆಗೆ ನಿಜವಾದ ಅರ್ಥ ಬಂದೀತು ಎಂದು ತಾ.ಪಂ. ಅಧಕ್ಷ್ಯ ಹೇಳಿದರು. ಅವರು ತಾಲೂಕು ಪಂಚಾತ್ ನ ಅವರಣದಲ್ಲಿ ನೆಡದ ಸ್ವಾತಂತ್ರ್ಯೊತ್ಸವದ ದ್ವಜರೋಹಣ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ಈ ದೇಶದ ಸ್ವಾತಂತ್ರ್ಯಕ್ಕೆ ಬಲಿದಾನ ಮಾಡಿದ ಹಿರಿಯರ ಇತಿಹಾಸವನ್ನು ತಿಳಿದುಕೊಂಡು ಅವರನ್ನು ಸ್ಮರಿಸುವ ಕೆಲಸ ಆಗಬೇಕಾಗಿದೆ ಎಂದರು. ತಾ.ಪಂ.ಉಪಾಧ್ಯಕ್ಷ ಮಾತನಾಡಿ ಒಗ್ಗಟ್ಟಾಗಿ ದೇಶವನ್ನು ಉಳಿಸುವ ಕೆಲಸ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದಾಗಿದೆ ಎಂದರು. ಈ ಸಂದರ್ಭ ತಾ.ಪಂ.ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿಪ್ರಿಂಯಾನ್ ಮಿರಾಂದ ಉಪಸ್ಥಿತರಿದ್ದರು




