ಬಂಟ್ವಾಳ: ಸಶಕ್ತ , ಸದೃಡ ಮತ್ತು ಸ್ವಾಭಿಮಾನಿ ದೇಶವನ್ನು ಕಟ್ಟುವಲ್ಲಿ ಭಾರತದ ಎಲ್ಲಾ ಜನರು ಒಂದಾಗಿ ಕೈಜೋಡಿಸಿದಾಗ ಮಾತ್ರ ಅಖಂಡ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ . ಕಲ್ಪನೆಯ ವಿಷಯವಲ್ಲ ಸಾಕಾರಗೊಳಿಸುವ ಯುವಕರ ಬಹುದೊಡ್ಡ ಕನಸು. ಕೇವಲ ದೆಹಲಿಯಲ್ಲಿ ಮಾತ್ರವಲ್ಲ ಪಕ್ಕದ ಲಾಹೋರ್ನಲ್ಲಿ ಮತ್ತು ಡಾಕಾದಲ್ಲಿ ತ್ರಿವರ್u ರಂಗವನ್ನು ಹಾರಿಸುವ ನಮ್ಮೆಲ್ಲರ ಕನಸು ಅಕ್ಷರಸಃ ನನಸಾಗುತ್ತದೆ ಎಂದು ಬೆಂಗಳೂರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ರಾಷ್ಟ್ರೀಯಕಾರ್ಯದರ್ಶಿ ಶ್ರೀ ವಿನಯ ಬಿದ್ರೆ ಹೇಳಿದರು
ಅವರು ಬಂಟ್ವಾಳ ಹಿಂ.ಜಾ.ವೇ. ಆಶ್ರಯದಲ್ಲಿ1947ರ ಆಗಸ್ಟ್14ರ ಮಧ್ಯರಾತ್ರಿ ಭಾರತ ವಿಭಜನೆಯ ವಿರುದ್ಧಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ದಿಕ್ಷೂಚಿ ಭಾಷಣ ಮಾಡಿದರು.

ಬೇರೆ ಬೇರೆ ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿಷ್ಯಂಡ್ಯತ್ರ ಮಾಡುತ್ತಿರುವ ಎಲ್ಲಾ ಭಯೋತ್ಪಾದಕ ಸಂಘಟನೆಗಳು ಪ್ರಸ್ತುತ ಒಂದೇ ಹೆಸರಿನಲ್ಲಿ ನಮ್ಮ ದೇಶದ ಮೇಲೆ ದಾಳಿ ಮಾಡಲು ಹೊರಟಿದೆ. ಏಳು ದಶಗಳಲ್ಲಿ ಭೂತಾನ್ ಒಂದು ಬಿಟ್ಟರೆ ಉಳಿದ ಆರು ದೇಶಗಳು ನಮ್ಮ ವಿರುದ್ದ್ರ ಕೆಲಸ ಮಾಡುತ್ತಿವೆ. ಹಾಗಾಗಿ ನಾವು ಎಚ್ಚರದಿಂದಿರಬೇಕು ಎಂದರು. ದೇಶ ಪ್ರೇಮದ ಉದ್ದೇಶದಿಂದ ದೇಶ ಭಕ್ತ ಯುವಕ ಸಂಘಟನೆಗಳು ಹತ್ತು ಹಲವು ಕಾರ್ಯಕ್ರಗಮಗಳನ್ನು ಹಾಕಿಕೊಂಡು ಹಿಂದೂ ಸಮಾಜ ಒಗ್ಗಟ್ಟಾದಾಗ ಮಾತ್ರ ದೇಶ ಉಳಿಯುತ್ತೆ. ಇಲಲಿನ ಹಿಂದೂ ಜಾಗರಣೆ ವೇದಿಕೆಯ ಕಾರ್ಯಕ್ರಮ ನಮಗೆಲ್ಲರಿಗೆ ಹೊಸ ಚೈತನ್ಯ ಮತ್ತು ದೇಶದ ಕೆಲಸ ಮಾಡಲು ಸಾಮಾಥ್ರ್ಯವನ್ನು ತಂದುಕೊಟ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಸರಕಾರದ ಭೂಸೇನೆಯಲ್ಲಿ ಸುಬೇದಾರ್ ಆಗಿ ನಿವೃತ್ತಿ ಹೊಂದಿರುವ ದಾಮೋದರಎಸ್. ಮಂಗಳೂರು ವಹಿಸಿದ್ದರು.
ವೇದಿಕೆಯಲ್ಲಿ ಪ್ರಮುಖರಾದ ಕೊಡ್ಮಾನ್ ಕಾಂತಪ್ಪ ಶೆಟ್ಟಿ ,ವಿಶ್ವ ಹಿಂದೂ ಪರಿಷತ್ನ ಬಂಟ್ವಾಳ ಪ್ರಖಂಡ ಅಧ್ಯಕ್ಷರಾದ ಅರುಣ್ ಕುಮಾರ್ ಮುಲಿಯಾಲ್ ಗುತ್ತು , ಹಿಂದೂ ಜಾಗರಣವೇದಿಕೆಯ ಪುತ್ತೂರು ಜಿಲ್ಲಾ ಸಂಚಾಲಕ ರವಿರಾಜ್ ಶೆಟ್ಟಿ ಕಡಬ, ಹಿಂದುಜಾಗರಣ ವೇದಿಕೆ ಬಂಟ್ವಾಳ ತಾಲೂಕುಅಧ್ಯಕ್ಷರಾದಚಂದ್ರ ಕಲಾಯಿ ಹಾಗೂ ಸಂಚಾಲಕರಾದ ಪ್ರಶಾಂತ್ಕೆಂಪುಗುಡ್ಡೆ ಉಪಸಿತರಿದ್ದರು. ಸ್ವಾಗತ ತಿರುಲೇಶ್ ಧನುಪೂಜೆ, ಬಾಲಕೃಷ್ಣ ದನ್ಯವಾದ ಮತ್ತು ಕಾರ್ತಿಕ್ ಮೈಯರಬೈಲು ಪ್ರತಿಜೆ ಮಾಡಿದರು.
ಕಾರ್ಯಕ್ರಮ ಆರಂಭದಲ್ಲಿ ಬಿ.ಸಿ.ರೋಡು ಪೊಳಲಿ ಮಹಾದ್ವಾರದ ಬಳಿಯಿಂದ ಹೊರಟು ಬಿ.ಸಿ.ರೋಡು ಮುಖ್ಯ ವೃತ್ತದಲ್ಲಿ ತಿರುಗಿ ಬಿ.ಸಿ.ರೋಡು ತಾಲೂಕು ಕಛೇರಿಯ ಮುಂಭಾಗದಲ್ಲಿ ನಡೆಯುವ ಸಭಾಕಾರ್ಯಕ್ರಮದವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

