ಕೈಕಂಬ: ಯಕ್ಷಕಲಾ ಸಂಘ ವರಕೋಡಿ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಸಮಾರಂಭವು  ಆ.15 ರಂದು  ಸೋಮವಾರ ಬೆಳಗ್ಗೆ 9.30 ಕ್ಕೆ ಜರಗಲಿದೆ. ಪೊಳಲಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮಿಜಿ ಧ್ವಜರೋಹನ ನೆರವೇರಿಸಲಿದ್ದಾರೆ.
 * ಆಟೋಟ ಸ್ಪರ್ಧೆ
ಕೆಸರು ಗದ್ದೆಯಲ್ಲಿ ಬಾಲಕಿಯರಿಗೆ ,ಬಾಲಕರಿಗೆ,ಯುವಕ,ಯುವತಿಯರಿಗೆ ವಿವಿಧ ಬಗೆಯ ಕ್ರೀಡಾ ಸ್ಪರ್ಧೆಗಳು ಹಾಗೂ ಬಾಲಕರಿಗೆ ಕೆಸರುಗದ್ದೆ ಕಬಡ್ಡಿ ಪಂದ್ಯಾಟ , ರಸಪ್ರಶ್ನೆ ಹಾಗೂ ಸೂಪರ್ ಮಿನಿಟ್ ಆಟೋಟ ಸ್ಪರ್ಧೆಗಳು ನಡೆಯಲಿದೆ.

* ಕ್ರೀಡಾ ಕೂಟ  ಉದ್ಘಾಟನೆ

ಯಕ್ಷಗಾನ ಕಲಾವಿದ ಮಾಧವ ಕೊಳತ್ತಮಜಲು ಕ್ರೀಡಾ ಕೂಟದ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಡ್ಲಾಯ ದೈವದ ಪಾತ್ರಿ ಚಂದ್ರಶೇಖರ ಅಜಿಲ ವಹಿಸುವರು. ಬಡಗಬೆಳ್ಳೂರು ಗ್ರಾ. ಪಂ. ಸದಸ್ಯರಾದ ವಸಂತ ಅಂಚನ್, ನಿತಿನ್ ಆಳ್ವ ಉಪಸ್ಥಿತರಿರುವರು.

 * ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಕೃಷಿಕ ರಾಜೇಶ್ ನಾಯಕ್  ಉಳಿಪಾಡಿಗುತ್ತು , ಬಡಗಬೆಳ್ಳೂರು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಬಟ್ಟಾಜೆ, ಬೆಂಜನಪದವು ಸ.ಪ. ಕಾಲೇಜು ದೇವದಾಸ್ ಅರ್ಕುಳ, ಬಂಟ್ವಾಳ ತಾ. ಪಂ. ಸದಸ್ಯ ಯಶವಂತ ಪೊಳಲಿ ,ಯಕ್ಷಕಲಾ ಸಂಘದ ಅಧ್ಯಕ್ಷ ಶಂಕರ ನಾಲಿಮಾರ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *