ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಮತ್ತು ಗ್ರಾ.ಪಂ. ಅಮ್ಟಾಡಿ, ಚೈತನ್ಯ ಸ್ತ್ರೀ ಶಕ್ತಿ ಗೊಂಚಲು ಅಮ್ಟಾಡಿ ಮತ್ತು ನಿತ್ಯಶ್ರೀ ಸ್ತ್ರೀ ಶಕ್ತಿ ಗೊಂಚಲು ಕುರಿಯಾಳ ಇದರ ಸಂಯುಕ್ತ ಆಶ್ರಯದಲ್ಲಿ ಪಂಜಿಕಲ್ಲು ವಲಯ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಅಮ್ಟಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ ಶೆಟ್ಟಿ, ತಾ.ಪಂ. ಸದಸ್ಯೆ ಮಲ್ಲಿಕಾ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ಹಿರಿಯ ಮೇಲ್ವಿಚಾರಕಿ ಗಾಯತ್ರಿಕಂಬಳಿ, ಪಿಡಿಓ ರಾಜಶೇಖರ್ ರೈ, ಗ್ರಾ.ಪಂ. ಸದಸ್ಯರಾದ ರತ್ನಾವತಿ, ಚಂದ್ರಾವತಿ, ಐರಿನ್ ಡಿ’ಸೋಜಾ, ಡಾ| ರಾಮ್ ರಾಜೇಶ್, ಗಿರೀಜಾ ಮೋನಪ್ಪ ಮತ್ತಿತರರು ಉಪಸ್ಥಿತರಿದ್ದರು.
