ತಲಪಾಡಿ: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ ಇತ್ತೀಚೆಗೆ ನಡೆಯಿತು. ಶಾಲಾ ನಾಯಕ, ತೋಟಗಾರಿಕೆ, ಶಿಸ್ತು, ಶುಚಿತ್ವ, ಕ್ರೀಡೆ ಹಾಗೂ ನೀರಾವರಿ ಇಲಾಖೆಗಳಿಗೆ ಸಂಬಂಧಿಸಿದಂತೆ 20 ವಿದ್ಯಾರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಮುಖ್ಯ ಚುನಾವಣಾಧಿಕಾರಿಗಳಾಗಿ ಅಫ್ರೀಝ್, ಸಹಾಯಕ ಚುನಾವಣಾಧಿಕಾರಿಗಳಾಗಿ ಝಾಕಿರ್, ಫಾರೂಕ್, ತಂಝಿಲ್ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆ ಪಡೆದರು. ಚುನಾವಣಾ ವೀಕ್ಷಣಾಧಿಕಾರಿಯಾಗಿ ಮಿಸ್ಬಾಹ್ ಕರ್ತವ್ಯ ನಿರ್ವಹಿಸಿದರು. ಶಾಂತಿಯುತ ಮತದಾನಕ್ಕಾಗಿ 10 ನೇ ತರಗತಿ ಉನೈಸ್ ಭದ್ರತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಮುಖೋಪಾಧ್ಯಾಯರಾದ ಮಹಮ್ಮದ್ ರಫೀಕ್ ಕೆ, ದೈಹಿಕ ಶಿಕ್ಷಣ ಶಿಕ್ಷಕರಾದ ಭರತ್ ಎಂ, ಚಿತ್ರಕಲಾ ಶಿಕ್ಷಕರಾದ ನವೀನ್ ಪ್ರಸಾದ್ ಮೋಂತೆರೋ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

By suddi9

Leave a Reply

Your email address will not be published. Required fields are marked *