ಉಳ್ಳಾಲ: ಪವಿತ್ರ ಹಜ್ ಯಾತ್ರೆ ಕೈಗೊಳ್ಳಳಿರುವ ಯಾತ್ರಾತ್ರಿಗಳಿಗೆ ದರ್ಗಾ ಸಮಿತಿಯ ವತಿಯಿಂದ ಬೀಳ್ಕೊಡುಗೆ ಸಮಾರಂಭವು ದರ್ಗಾ ಅಧಕ್ಷರಾದ ಹಾಜಿ ಅಬ್ದುಲ್ ರಶೀದ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ  ಫ್ರೋಪೆಸರ್ ಹಾಜಿ ಅಹ್ಮದ್ ಬಾವ ಮುಸ್ಲಿಯಾರ್‍ರವರು ದುಆ ಗೈದರು.photo

ಈ ವರ್ಷ ಹಜ್ ಯಾತ್ರೆ ಕೈಗೊಳ್ಳಲಿರುವ ದರ್ಗಾ ಸಮಿತಿ ಸದಸ್ಯರಾದ, ಪಿ.ಎಸ್ ಇಬ್ರಾಹೀಮ್ ಬಾವ ಕುಂಪಲ, ಯು.ಕೆ ಹನೀಫ್ ಮಾರ್ಗತಲೆ, ಫಾರೂಕ್ ಮಾರ್ಗತಲೆ, ಮಾಜಿ ದರ್ಗಾ ಸದಸ್ಯರಾದ ಕುಂಞ ಮೋನು ಕಲ್ಲಾಪು, ಮಾಜಿ ಟ್ರಸ್ಟ್ ಸದಸ್ಯರಾದ ಯು.ಕೆ ಇಬ್ರಾಹೀಮ್,. ಕಾದರ್ ಮಾರ್ಗತಲೆ, ಸಿಬ್ಬಂದಿಗಳಾದ ಅಬೂಬಕ್ಕರ್ ಮುಸ್ಲಿಯಾರ್ ಕುಂಪಲ, ಅಬೂಬಕ್ಕರ್ ಮದನಿ, ಕಾದರ್ ಮದನಿ ಮುಕ್ಕಚ್ಚೇರಿಯವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಖತೀಬರಾದ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್, ಫ್ರೋಪೆಸರ್ ಸರ್ ಅಬ್ದುಲ್ ರಶಿದ್ ಮದನಿ, ದರ್ಗಾ ಉಪಾಧ್ಯಕ್ಷರಾದ ಯು.ಕೆ ಮೋನು ಕೋಟೆಪುರ, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ತ್ವಾಹ ಮುಹಮ್ಮದ್, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಲೆಕ್ಕ ಪರಿಶೋಧಕರಾದ ಯು.ಟಿ ಇಲ್ಯಾಸ್ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *