ಬಂಟ್ವಾಳ: ಬಂಟ್ವಾಳ ಶ್ರೀ ವೆಂಕಟರಮಣ ಸ್ವಾವಿೂ ಪದವಿ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಫಲಿತಾಂಶ ಹೀಗಿದೆ. ಇಲ್ಲಿನ ಬಿ.ಸಿ.ಎ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದು, 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಜೊಸಿಲಿನ್ ಡಿ.ಸೋಜ ಇವರಿಗೆ ಶೇ.93.5 ಅಂಕ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ಶೇ 97 ಫಲಿತಾಂಶ ದಾಖಲಿಸಿದ್ದು, ಏಳು ಮಂದಿ ವಿದ್ಯಾರ್ಥಿಗಳು ಶೇ 90 ಅಂಕ ಗಳಿಸಿದ್ದಾರೆ. ಒಟ್ಟು 16 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 5 ಮಂದಿ ಪ್ರಥಮ ಶ್ರೇಣಿ ಹಾಗೂ ಕಾವ್ಯ ಕೆ. ನಾಯಕ್ ಇವರು ಶೇ.99.22 ಅಂಕ ಗಳಿಸಿದ್ದಾರೆ.ಕಲಾ ವಿಭಾಗದಲ್ಲಿ ಶೇ 89.66 ಫಲಿತಾಂಶ ದಾಖಲಾಗಿದ್ದು, ಮೂವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 10 ಮಂದಿ ಪ್ರಥಮ ಶ್ರೇಣಿ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 88 ಫಲಿತಾಂಶ ದಾಖಲಾಗಿದ್ದು, ಆರು ಮಂದಿ ವಿದ್ಯಾರ್ಥಿಗಳು ಶೇ 90 ಅಂಕ ಗಳಿಸಿದ್ದಾರೆ. 20 ಮಂದಿ ವಿಶಿಷ್ಟ ಶ್ರೇಣಿ ಮತ್ತು 106 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಗಳಿಸಿ ರಮ್ಯ ಇವರು ಶೇ 96.67 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಿ.ಬಿ.ಎಂ. ವಿಭಾಗದಲ್ಲಿ ಶೇ 63.16 ಫಲಿತಾಂಶ ದಾಖಲಾಗಿದ್ದು, ಒಬ್ಬರು ವಿಶಿಷ್ಟ ಶ್ರೇಣಿ ಮತ್ತು ನಾಲ್ವರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *