ಮೂಲ್ಕಿ: ಕಿನ್ನಿಗೋಳಿ-ಮೂಲ್ಕಿ ರಾಜ್ಯ ಹೆದ್ದಾರಿಯ ಗೇರುಕಟ್ಟೆ ರೈಲ್ವೆ ಸೇತುವೆ ಬಳಿಯಲ್ಲಿ ಕಿನ್ನಿಗೋಳಿಯಿಂದ ಮೂಲ್ಕಿ ಕಡೆಗೆ ಬರುತ್ತಿದ್ದ ಗೂಡ್ಸ್ ಕಂಟೈನರ್ (ಕೆಎ19ಎ0045) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರದ ಪೂದೆಯೊಳಗೆ ನುಗ್ಗಿದ ಘಟನೆ ಶನಿವಾರ ರಾತ್ರಿ ನಡೆದಿದೆ

ಕಿನ್ನಿಗೋಳಿಯಿಂದ ಮುಲ್ಕಿ ಕಡೆಗೆ ಸಂಚರಿಸುತ್ತಿದ್ದ ಕಂಟೈನರ್ ರಾತ್ರಿ ಸುಮಾರು 10 ಗಂಟೆಗೆ ಗೇರು ಕಟ್ಟೆ ರೈಲ್ವೆ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬಿಟ್ಟು ಸುಮಾರು ಎರಡು ಅಡಿಯಷ್ಟು ಎತ್ತರದ ಪಕ್ಕದ ಪೂದೆಯೊಂದಕ್ಕೆ ನುಗ್ಗಿದೆ, ರಾತ್ರಿ ಆದ ಕಾರಣ ವಾಹನ ಸಂಚಾರ ಕಡಿಮೆ ಇದ್ದು, ಪಕ್ಕದಲ್ಲೆ ವಿದ್ಯುತ್ ಕಂಬವಿದ್ದು ಡಿಕ್ಕಿ ಹೊಡೆದಿದ್ದರೆ ದೊಡ್ಡ ಅನಾಹುತವಾಗುವ ಸಾದ್ಯತೆ ಇತ್ತು, ಚಾಲಕ ಕುಡಿ ಮತ್ತಿನಲ್ಲಿ ಚಾಲನೆಯಲ್ಲಿದ್ದು ಅಪಘಾತ ಭಯಾನಕ ಸ್ಥಿತಿಯಲ್ಲಿತ್ತು, ಮುಲ್ಕಿ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿದ್ದಾರೆ.
