ಕಟೀಲು:ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳಿಂದ ಲೋಕ ಕಲ್ಯಾಣಾರ್ಥವಾಗಿ ಮತ್ತು ಮಾಗಣೆಯ ಸಮಸ್ತರ ಸುಭೀಕ್ಷೆಗಾಗಿ ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವಂತೆ, ಬುಧವಾರ ಸಂಪ್ರದಾಯಬದ್ಧ ಧಾರ್ಮಿಕ ವಿಧಿ ವಿಧಾನದ ಸೀಯಾಳಾಭಿಷೇಕ ನಡೆಯಿತು. ಬೆಳಿಗ್ಗೆ ಮಲ್ಲಿಗೆ ಅಂಗಡಿ ಸಮೀಪದ ಹೂ ಹಾಕುವ ಕಲ್ಲು ಬಳಿಯಿಂದ ಕಟೀಲು ಶ್ರೀ ದೇವಿಯ ಸನ್ನಿಧಿಗೆ ಮೆರವಣಿಗೆ ಸಾಗಿ ನಂತರ ಕಟೀಲು ದೇವಳದಲ್ಲಿ ಸೀಯಾಳಾಭಿಷೇಕ ನಡೆಯಿತು ಈ ಸಂದರ್ಭ ಅತ್ತೂರು ಕೊಡೆತ್ತೂರು ಮಾಗಣೆಯ ನೂರಾರು ಭಕ್ತರು ಪಾಲ್ಗೊಂಡರು.

