ಕಿನ್ನಿಗೋಳಿ;ಸಂಘಟನ ಶಕ್ತಿಯಿಂದ ಸಮಾಜ ಸೇವೆ ಸಾದ್ಯ, ಸಮಾಜ ಮುಖಿ ಕೆಲಸಗಳನ್ನು ನಿರಂತರ ಮಾಡಿ ಬೇರೆ ಸಂಸ್ಥೆಗಳಿಗೆ ಮಾದರಿಯಾಗಿ ಬೆಳೆಯ ಬೇಕು ಎಂದು ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಗೌರಾವಾಧ್ಯಕ್ಷ ಭುವನಾಭಿರಾಮ ಉಡುಪ ಹೇಳಿದರು ಅವರು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು, ಈ ಸಂದರ್ಭ ಇತ್ತಿಚೆಗೆ ಅಪಘಾತದಲ್ಲಿ ನಿಧನರಾದ ಪಕ್ಷಿಕೆರೆ ರಿಕ್ಷಾ ಪಾರ್ಕ್ ನ ಸದಾನಂದ ಸುವರ್ಣರವರ ಪತ್ನಿ ಲತಾ ಅವರಿಗೆ ಧನ ಸಹಾಯ ನೀಡಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಮೇಶ್ ಕೋಟ್ಯಾನ್ ವಹಿಸಿದ್ದರು, ಕಾರ್ಯದರ್ಶಿ ಶಶಿಕಾಂತ್ ವರಧಿ ವಾಚಿಸಿದರು, ಕೋಶಾಧಿಕಾರಿ ವಸಂತ ಶೆಟ್ಟಿಗಾರ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು ಈ ಸಂದರ್ಭದಲ್ಲಿ ಪಧಾಧಿಕಾರಿಗಳಾದ ಸತೀಶ್ ಕಲ್ಲಮುಂಡ್ಕೂರು, ಶ್ರೀನಿವಾಸ ಎಸ್ಕೋಡಿ, ಜೇಮ್ಸ್ ಮಾರ್ಟಿಸ್, ಉದಯಕುಮಾರ್ ಏಳಿಂಜೆ, ರಾಜೇಶ್ ಕಿಲೆಂಜೂರು, ಜಯರಾಮ, ಹರೀಶ್ ಶಿಮಂತೂರು, ಹರಿಣಾಕ್ಷ ಪುನರೂರು, ಬಾಲಕೃಷ್ಣ, ಗೋಪಾಲ ಬಂಗೇರ, ಹರೀಶ್ ಕೊಯಿಲ ನಾಗರಾಜ ಮತ್ತಿತರರು ಇದ್ದರು.

