ಮುತ್ತೂರು: ಸರ್ಕಾರಿ ಪದವಿಪೂರ್ವ ಕಾಲೇಜು ಮುತ್ತೂರಿನ ‘ಫಲ್ಗುಣಿ’ ಇಕೋ-ಕ್ಲಬ್ ನ ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂಡುಬಿದಿರೆ ಎಕ್ಸಲೆಂಟ್ ಪಿ.ಯು. ಕಾಲೇಜಿನ ಆಡಳಿತಾಧಿಕಾರಿ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರುತಕೀರ್ತಿರಾಜ್, ಪರಿಸರ ಹಾಗೂ ಸ್ವಚ್ಛತೆಯ ಬಗ್ಗೆ ಮಾತನಾಡಿ, ಕಾಲೇಜಿನ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

2

3
ಇನ್ನೋರ್ವ ಅತಿಥಿ ಮುತ್ತೂರು ಪ್ರೌಢಶಾಲೆಯ ವಿಜಾÐನ ಶಿಕ್ಷಕರಾದ ಶ್ರೀಮತಿ ಉದಯಕುಮಾರಿ, ಇಕೋ-ಕ್ಲಬ್ ಚಟುವಟಿಕೆಗಳ ಕುರಿತಾದ ಮಾಹಿತಿ ನೀಡಿದರು.
ಈ ಸಂದರ್ಭ ಪರಿಸರ ಕುರಿತಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಭಾಷಣ ಹಾಗೂ ಉಪನ್ಯಾಸಕರಿಂದ ಪರಿಸರಗೀತೆಯನ್ನು ಆಯೋಜಿಸಲಾಗಿತ್ತು.
ಕಸದಿಂದ ರಸ ಕುರಿತಾದ ವಸ್ತುಪ್ರದರ್ಶನ ಗಮನಸೆಳೆಯಿತು.
ಪ್ರಾಂಶುಪಾಲ ಶ್ರೀ ನಿರಂಜನ್ ಎ., ಉಪನ್ಯಾಸಕ ವರ್ಗ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಕೋ-ಕ್ಲಬ್ ಕಾರ್ಯದರ್ಶಿ ಶ್ರೀಮತಿ ಶ್ವೇತಾ ಕೆ. ಹಾಗೂ ಜೊತೆಕಾರ್ಯದರ್ಶಿ ಶ್ರೀ ಆನಂದು ಭೋವಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಕು. ರಶ್ಮಿ ಜಿ. ಸ್ವಾಗತಿಸಿ, ವಿದ್ಯಾರ್ಥಿನಿ ಕು. ಡಿಂಪಲ್ ವಂದಿಸಿದರು.
*********************

By suddi9

Leave a Reply

Your email address will not be published. Required fields are marked *