ಕಲಿಗಾಲ ಎಂಬ ಮಾಯಾ ಯುಗದಲ್ಲಿ ಬರಗಾಲ ಎಂಬ ಬೀತಿಯು ಹುಟ್ಟಿದಾಗ ಮನು ಕುಲದ ಉಳಿವು ಹೇಗೆ ಎಂದು ನಾರದ ಮಹರ್ಷಿಗಳು ಕೇಳಿದಾಗ ಬ್ರಹ್ಮದೇವನು ಅದಕ್ಕೆ ಪರಿಹಾರ ಎಂಬಂತೆ ಪರಮ ಪವಿತ್ರವಾದ ಸುಬ್ರಹ್ಮಣ್ಯನ ಕತೆಯನ್ನು ಹೇಳುತ್ತಾರೆ. ಕೇದಾರ ಎಂಬ ವಿಪ್ರೋತ್ತಮನು ಮಾಣೂರು ಎಂಬ ಊರಿನಲ್ಲಿ ವಾಸಿಸುತ್ತಿರುವನು. ಆದರೆ ಅವನ ಜೀವನದಲ್ಲಿ ಒಂದು ಕೊರತೆ ಇತ್ತು. ಅವನಿಗೆ ಸಂತಾನ ಯೋಗವಿರಲಿಲ್ಲ. ಅವನು ಅದಕ್ಕಾಗಿ ಮಾಡದ ಸತ್ಕರ್ಮವಿಲ್ಲ ಬೇಡದ ದೇವರಿಲ್ಲ. ಒಂದು ದಿ ಅವನು ವಿಹರಿಸುತ್ತಾ ಬದ್ರಾಸರಸ್ವತಿ ತೀರ್ಥದ ಬಳಿಗೆ ಬರುತ್ತಾನೆ. ಆ ತಿರ್ಥವು ಪರಮ ಪವಿತ್ರವಾದ ತೀರ್ಥವಾಗಿರುತ್ತದೆ. ಅಲ್ಲಿ ದೇವತೆಗಳು ಗಂಧರ್ವರು ಋಷಿಮುನಿಗಳು ಮಿಂದು ಹೋಗುತ್ತಾರೆ.ಕೇದಾರನಿಗೆ ಆ ತೀರ್ಥದ ತಟದಲ್ಲಿ ಶ್ರೀಂಗ ಮಹರ್ಷಿಗಳು ಧ್ಯಾನಸಕ್ತರಾಗಿರುವುದು ಗೋಚರಿಸುತ್ತದೆ. ಋಷಿವರ್ಯರಲ್ಲಿ ತನ್ನ ನೊಂದ ಮನಸ್ಸಿನ ಬೇನೆಯನ್ನು ತೋಡಿಕೋಳ್ಳುತ್ತಾನೆ.

IMG-20160707-WA0025

ಅವನು ಚಿಂತೆಗೆ ಸ್ಪಂದಿಸಿದ ಋಷಿವರ್ಯರು ತೀರ್ಥದ ಬಳಿ ಸುಬ್ರಹ್ಮಣ್ಯನ ಕುರಿತು ತಪಸ್ಸನ್ನಾಚರಿಸಲು ತಿಳಿಸುತ್ತಾರೆ.ಋಷಿಗಳ ಉಪದೇಶದಂತೆ ಕೇದಾರನು ಸಚೀರ್ಬೂತನಾಗಿ ಬದ್ರಾಸರಸ್ವತಿ ತೀರ್ಥದ ಬಳಿ ತಪಸ್ಸನ್ನಾಚರಿಸುತ್ತಾನೆ. ಕೇದಾರನ ತಪೋಜ್ವಾಲೆಗೆ ಇಡೀ ಬ್ರಹ್ಮಾಂಡವು ಬೇಯುತ್ತಿರಲು ದಿಕ್ಕೆಟ್ಟ ದೇವತೆಗಳು ಶಿವನಲ್ಲಿ ಮೊರೆಇಡುತ್ತಾರೆ. ದೇವತೆಗಳ ಮೊರೆಯನ್ನು ಆಲಿಸಿದ ಪರಶಿವನು ಮಗನಾದ ಕುಮಾರನಲ್ಲಿ ಕೇದಾರನ್ನು ಪೊರೆದು ಉದ್ದರಿಸುವಂತೆ ತಿಳಿಸುತ್ತಾನೆ. ತಂದೆಯ ಮಾತಿನಂತೆ ಗಾಂಗೇಯನು ತಪೋನಿರತನಾದ ಕೇದಾರನ ಬಳಿ ಅವೀರ್ಬವಿಸಿ ಬೇಕಾದ ವರವನ್ನು ಕೇಳುವಂತೆ ತಿಳಿಸುತ್ತಾನೆ. ಕೇದಾರನಿಗೆ ಅತೀವ ಸಂತೋಷವಾಗಿ ಕಾರ್ತಿಕೆಯನಲ್ಲಿ ಮೊರೆ ಇಡುತ್ತಾನೆ.ದೇವಾ ಪುತ್ರ ಸಂತಾನವಿಲ್ಲದ ಮನುಜನು ಮುಕ್ತಿ ಪಡೆಯಲು ಅನರ್ಹನು ಎಂದು ಶಾಸ್ತ್ರ ಒದಿ ತಿಳಿದಿರುವೆನು. ಅದಕ್ಕಾಗಿ ನನಗೆ ಸಂತಾನ ಭಾಗ್ಯವನ್ನು ನೀಡಿ ಕರುಣಿಸು ಎಂದು ಬೇಡಲು ದಯಾಪರನಾದ ಷಣ್ಮುಗನು ತತಾಸ್ತು ಎಂದು ಅದ್ರಷ್ಟನಾದನು ಆದರೆ ಸ್ಕಂದನ ಅನುಗ್ರಹ ಪಡೆದು ಬಹುಕಾಲವಾದರೂ ಸಂತಾನ ಫಲ ಇಲ್ಲದನ್ನು ನೋಡಿ ಕೇದಾರ ದಂಪತಿಗಳು ಚಿಂತಿತರಾದರು.

ಒಂದು ದಿನ ಕೇದಾರನ ಪತ್ನಿಯು ದಾರಿಯಲ್ಲಿ ಹಾವೊಂದು ಮೊಟ್ಟೆ ಇಡುವುದನ್ನು ನೋಡಿ ಮನಸ್ಸಿನಲ್ಲಿಯೇ ಅಲೋಚಿಸುತ್ತಾಳೆ. ತೇವಳುವ ಹಾವಿಗಾದರೂ ಈ ಫಲವಿದೆ ಮನುಜಳಾದ ನನಗಿಲ್ಲವಾಯಿತೆ ದೇವಾ ಎಂದು . ಮಾಡಿದ ಅಲೋಚನೆಯೋ, ಕರ್ಮದ ಫಲವೋ ಎಂಬಂತೆ ಕೆಲವೇ ದಿನಗಳಲ್ಲಿ ಆಕೆಯು ಗರ್ಬಿಣಿಯಾಗುತ್ತಾಳೆ.ತಿಂಗಳು ತುಂಬಿದ ಈಕೆ ಎರಡು ಉರಗ ಮೊಟ್ಟೆಗಳಿಗೆ ಜನ್ಮ ನೀಡುತ್ತಾಳೆ. ಉರಗ ಮೊಟ್ಟೆಯನ್ನು ಕಂಡು ಕೇದಾರನು ಚಿಂತಿತನಾಗಿ ಕಣ್ಣೀರಿಡುತ್ತಾನೆ. ಕೇದಾರನ ಕಣ್ಣೀರಿನ ಮೊರೆಯನ್ನು ಆಲಿಸಿದ ಗಾಂಗೇಯನು ಆಶರೀಕ ವಾಣಿಯ ಮೂಲಕ ಕೇದಾರನಿಗೆ ಎಚ್ಚರಿಸುತ್ತಾನೆ. ಕೇದಾರ ನಿನಗೆ ಸಂತಾನ ಯೋಗವೇ ಇಲ್ಲ ಆದರೆ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ನೀನು ಆ ಉರಗ ಮೊಟ್ಟೆಯನ್ನು ಭದ್ರಾ ಸರಸ್ವತಿ ತೀರ್ಥದ ಬಳಿ ಪ್ರತಿಷ್ಠಾಪಿಸು ನಿನಗೆ ಮುಕ್ತಿಯ ಪಥವನ್ನು ತೋರಿಸುತ್ತೇನೆ.

 

ಆ ಎರಡು ಉರಗ ಮೊಟ್ಟೆಯಲ್ಲಿ ನಾನೂ, ಮಹಾವಿಷ್ಣು ಹಾಗೂ ಮಹಾಶೇಷ ಆವೀರ್ಬವಿಸಿ ಭಕ್ತಿ ಸಂಕುಲವನ್ನು ಪರೆದು ಸೂರ್ಯ ಚಂದ್ರರಿರುವವರೆಗೂ ನಿನ್ನ ಹೆಸರು ಅಜರಾಮರವಾಗುವಂತೆ ಮಾಡುತ್ತೇನೆ ಎಂದರು. ಸುಬ್ರಹ್ಮಣ್ಯನ ಅನುಗ್ರಹದಂತೆ ಕೇದಾರನು ಆ ಹಾವಿನ ಮೊಟ್ಟೆಗಳನ್ನು ಬದ್ರಾಸರಸ್ವತಿ ತೀರ್ಥ ಬಳಿ ಪ್ರತಿಷ್ಟಾಪಿಸಿ ಪೂಜಿಸಿ ಮುಕ್ತಿಯನ್ನು ಹೊಂದುತ್ತಾನೆ. ಮುಂದೆ ಕಲಿಯುಗದಲ್ಲಿ ಬ್ರಹ್ಮ ದೇವನು ನಾರದನಿಗೆ ಹೇಳಿದಂತೆ ಗಟನೆಯು ಸಂಭವಿಸುತ್ತದೆ. ಆ ಎರಡು ಉರಗ ಮೊಟ್ಟೆಗಳಲ್ಲಿ ಅನಂತ ಪದ್ಮನಾಭ ಮತ್ತು ಸುಬ್ರಹ್ಮಣ್ಯರು ಅವತರಿಸಿ ಇಂದಿಗೂ ಅಸಂಖ್ಯ ಭಕ್ತರನ್ನು ಪೊರೆಯುತ್ತಿದ್ದಾರೆ, ಮೊಟ್ಟೆಗಳನ್ನು ಪ್ರತಿಷ್ಟಾಪಿಸಿದ ಬದ್ರಾಸರಸ್ವತಿ ತೀರ್ಥವು ಶ್ರೀ ಕ್ಷೇತ್ರ ಕುಡುಪು ಆಗಿಯೂ, ಮೊಟ್ಟೆಗಳಿಗೆ ಜನ್ಮ ನೀಡಿದ ಕ್ಷೇತ್ರವು ಶ್ರೀ ಕ್ಷೇತ್ರ ಮಾಣೂರು ಆಗಿಯೂ ಭಕ್ತರನ್ನು ಉದ್ಧರಿಸಿತ್ತಿದೆ. ಮಾಣೂರು ಕ್ಷೇತ್ರವು ನೀರುಮಾರ್ಗ ಎಂಬ ಗ್ರಾಮದಲ್ಲಿದೆ.

ಲೇಖನ:ಕೆ.ಆರ್.ಶೆಟ್ಟಿ ಅಡ್ಯಾರ್ ಪದವು.

By suddi9

Leave a Reply

Your email address will not be published. Required fields are marked *