ಒಂದು ಕ್ಲಾಸಿನಲ್ಲಿ ಜೋರಾಗಿ ಎಲ್ಲರೂ ಗದ್ದಲ ಮಾಡುತ್ತಿದ್ದಾರೆಂದಿಟ್ಟುಕೊಳ್ಳಿ. ಅವರ ನಡುವೆಯೇ ಇರುವವನೊಬ್ಬನು ಬುದ್ದಿವಂತಿಕೆಯಿಂದ ಐದೇ ನಿಮಿಷದಲ್ಲಿ ಎಲ್ಲರೂ ಸುಮ್ಮನಿರುವಂತೆ ಮಾಡುತ್ತಾನೆ. ಆನಂತರ ಎಲ್ಲರೂ ಅವನ ಹಿಂಬಾಲಕರು.
ಊರಿನ ಯಾವುದೋ ಒಂದು ಮೂಲೆಯಲ್ಲಿ ಚಿಕ್ಕಪುಟ್ಟ ವಿಚಾರಕ್ಕೆ ಜಗಳವಾಗುತ್ತಿದ್ದರೆ ಎಲ್ಲಿಂದಲೋ ಬಂದ ವ್ಯಕ್ತಿತನ್ನ ಮಾತುಗಳಿಂದಲೇ ಅದನ್ನು ಬಗೆಹರಿಸುತ್ತಾನೆ. ಅವರಿಗೆ ಬುದ್ದಿ ಹೇಳುತ್ತಾನೆ. ಆ ಸಮಯದಲ್ಲಿ ಎಲ್ಲರ ಕಣ್ಣಲ್ಲೂ ಅವನೇ ಲೀಡರ್.
ಯಾವುದೋಒಂದು ಹೊಸ ಯೋಜನೆಯನ್ನು ರೂಪಿಸುವಾಗ, ಅನುಷ್ಟಾನಕ್ಕೆ ತರುವಾಗ, ಪ್ರತಿಯೊಬ್ಬರ ಅಭಿಪ್ರಾಯವೂ ಮುಖ್ಯವೇ. ಹಾಗೆಯೇಎಲ್ಲರ ಅಭಿಪ್ರಾಯಗಳನ್ನೂ ತೆಗೆದುಕೊಂಡು, ತಾನೇ ಮುಂದೆ ನಿಂತುಕೊನೆಗೆ ಉತ್ತಮವಾದ ಫಲಿತಾಂಶವನ್ನು ಕೊಡುತ್ತಾನಲ್ಲ ಅವನೇ ಲೀಡರ್. ಎಲ್ಲರಂತೆಯೇ ಅವನ ಯೋಚನೆಗಳಿದ್ದರೂ, ಅದರ ಹೊರತಾಗಿ ಧೈರ್ಯದಿಂದ ಬಂದದ್ದೆಲ್ಲವನ್ನೂ ಎದುರಿಸುವ ತಾಕತ್ತು ಆತನಿಗಿರುತ್ತದೆ.
ಎಂದಿನಿಂದ ನಾಗರಿಕತೆ ಬೆಳೆಯಿತೋ ಅಂದಿನಿಂದಲೂ ನಾಯಕರು ಇದ್ದಾರೆ.ಮಹಾಭಾರತದಲ್ಲಿ ನಾಯಕನಾದ ಶ್ರೀಕೃಷ್ಣನಂತಹ ದೇವತಾ ಪುರುಷರಿಂದ ಹಿಡಿದು ಕೃಷ್ಣದೇವರಾಯ, ಅಶೋಕನಂತಹ ಚಕ್ರವರ್ತಿಗಳು, ಹಿಟ್ಲರ್, ನೆಪೋಲಿಯನ್‍ ನಂತಹ ಸರ್ವಾಧಿಕಾರಿಗಳ ವರೆಗೂ ನಾನಾ ತರಹದ ನಾಯಕರು ಆಗಿ ಹೋಗಿದ್ದಾರೆ.ಇಡೀ ವಿಶ್ವವೇ ಬೆರಗಾಗಿ ನೋಡುವಂತೆ, ಯುವಜನತೆ ಎದ್ದು ನಿಲ್ಲುವಂತೆ ಮಾಡಿದ ಸ್ವಾಮಿ ವಿವೇಕಾನಂದರು ವರ್ಣಭೇದನೀತಿಯ ವಿರುದ್ದ ಹೋರಾಡಿದ ನೆಲ್ಸನ್ ಮಂಡೇಲಾ, ಅಹಿಂಸೆಯ ತತ್ವವನ್ನೇ ಹಿಡಿದುಕೊಂಡು ಬ್ರಿಟಿಷರನ್ನು ತೊಲಗಿಸಲು ಮುಂದಾಳತ್ವ ವಹಿಸಿದ್ದ ಮಹಾತ್ಮಾಗಾಂಧಿ, ಇಡೀದೇಶವನ್ನೇ ಆಳಿದ ಇಂಧಿರಾಗಾಂಧಿ, ಕ್ರಾಂತಿಕಾರಿ ಸಮಾಜವಾದಿ ಕಾರ್ಲ್ ಮಾಕ್ರ್ಸ್, ವಿನೋಬಾ ಭಾವೆ, ವಾಜಪೇಯಿ, ರೂಸ್ ವೆಲ್ಟ್, ಧೀರೂಭಾಯಿ ಅಂಬಾನಿ ಯಂತಹದೊಡ್ಡದೊಡ್ಡ ನಾಯಕರ ಹೆಸರನ್ನು ಕೇಳಿಯೇ ಇರುತ್ತೇವೆ. ಇವರೆಲ್ಲರಾತ್ರಿ ಬೆಳಗಾಗುವುದರೊಳಗೆ ನಾಯಕರಾದವರಲ್ಲ. ಮೊದಮೊದಲುತಮ್ಮದೇಚಿಕ್ಕಪುಟ್ಟ ವಲಯದಲ್ಲೋ, ಶಾಲಾ ಕಾಲೇಜಿನಲ್ಲೋ ಸಮರ್ಥ ಮುಂದಾಳತ್ವ ವಹಿಸಿ, ಮುಂದೆದೊಡ್ಡ ನಾಯಕನಾಗಿ ಬೆಳೆದವರು.

ಹಿಂದಿನ ಕಾಲದಲ್ಲಿರಾಜ ಮಹಾರಾಜರ ನಂತರ ಪಾಳೇಗಾರ, ಗೌಡಎಂದೆಲ್ಲಇಡೀಊರಿಗೆಒಬ್ಬ ನಾಯಕನಿರುತ್ತಿದ್ದ.ಇತರಜನರುಆತನನ್ನು ಹಿಂಬಾಲಿಸುತ್ತಿದ್ದರು.ಇಂದುಅದರರೂಪ ಬದಲಾದರೂ, ನಾಯಕತ್ವದ ಸ್ವರೂಪ ಬದಲಾಗಿಲ್ಲ. ಪುಟ್ಟ ಗುಂಪಿನ ಚರ್ಚೆಯಿಂದ ಹಿಡಿದು, ಪಾಲಿಮೆಂಟಿನವರೆಗೂ ನಾಯಕಇರಲೇಬೇಕು.ಎಲ್ಲರ ನಡೆವೆಇದ್ದುಕೊಂಡು, ಎಲ್ಲರ ಅಭಿಪ್ರಾಯಗಳನ್ನು ಆಲಿಸಿ, ಇತರರಕಡೆಯಿಂದ ಏನೇ ಫೀಡ್ ಬ್ಯಾಕ್ ಬಂದರೂಅದನ್ನು ಸ್ವೀಕರಿಸುವ ಮನಸ್ಥಿತಿ ನಾಯಕನಿಗೆ ಬೇಕು.ಜಾಯ್ನ್ ಮಾಕ್ಸ್ ವೆಲ್ ಹೇಳುವ ಹಾಗೆ, ನಾಯಕನಾಗುವುದು ಅವನ ಬಿರುದಿನಿಂದಲ್ಲ. ಬದಲಾಗಿ ಅವನು ಇತರರನ್ನು ಹೇಗೆ ಉತ್ತೇಜಿಸಿ, ಸರಿದಾರಿಯಲ್ಲಿಕೊಂಡೊಯ್ಯುತ್ತಾನೆಎಂಬುದರ ಮೇಲೆ ಹಾಗೂ ನಾಯಕನೆಂದರೆ ಸರಿಯಾದದಾರಿಗೊತ್ತಿರುವವನು, ಅದರಲ್ಲಿಯೇ ನಡೆಯುವವನು ಹಾಗೂ ಇತರರಿಗೂ ಆ ದಾರಿಯನ್ನುತೋರಿಸುವವನುಎಂದರ್ಥ.

ಲೀಡರ್‍ಶಿಪ್ ಎಂಬ ಶಬ್ದವೇ ರೋಮಾಂಚನವನ್ನು ಮಾಡುತ್ತದೆ. ಎಲ್ಲವನ್ನೂ ತಿಳಿದುಕೊಂಡಿದ್ದರೂ, ನಂಗ್ಯಾಕೆಇದೆಲ್ಲತಲೆನೋವುಎಂದು ಸುಮ್ಮನೆಇರುವವನಿಗಿಂತ, ಇಡೀಗುಂಪನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗುವವನು ನಾಯಕನಾಗುತ್ತಾನೆ. ಹೆದರಿಕೆ, ಮುಜುಗರವೆಂಬ ಚೌಕಟ್ಟನ್ನು ಬಿಟ್ಟುದಾಟಿ ಬಂದು ನಿರ್ದಿಷ್ಟಗುರಿತಲುಪುವವನುಎಲ್ಲರಕಣ್ಣಿಗೂರಿಯಲ್ ಹೀರೋಎಂಬಂತೆಕಾಣುತ್ತಾನೆ. ಇನ್ನೊಬ್ಬರ ತಪ್ಪುಗಳನ್ನು ತಿದ್ದಿ, ಸರಿಯಾದ ಮಾರ್ಗದಲ್ಲಿ ನಡೆಯಲು ಸಹಕರಿಸುತ್ತಾನೆ. ಒಳ್ಳೆಯ ಕಾಲ ಕೆಟ್ಟ ಕಾಲ ಎಂಬ ಎಂಬ ಭೇದವಿಲ್ಲದೆಯಾವಾಗಲೂತನ್ನ ಗುಂಪಿಗೆ ಬದ್ದನಾಗಿದ್ದು, ಕಠಿಣವಾದ ಸಮಯದಲ್ಲಿಯೂ ಸ್ಪೂರ್ತಿಯನ್ನು ನೀಡುತ್ತಾನೆ. ನಾಯಕನೆಂದರೆತನ್ನ ಬಲ ಅಥವಾಅಧಿಕಾರವನ್ನುತೋರಿಸುವವನುಎಂದುಅರ್ಥವಲ್ಲ. ಎಲ್ಲರಜೊತೆಗೂಗೌರವ, ನಮೃತೆಯಿಂದ ನಡೆದುಕೊಂಡರೆ ಮಾತ್ರ ಆ ನಾಯಕತ್ವಕ್ಕೊಂದು ಮೆರಗು. ಅವಕಾಶಗಳ ಜೊತೆಗೆ ಸವಾಲು, ಸೋಲು ಗೆಲುವು ನಾನಾ ತೊಂದರೆಗಳು, ಹೊಣೆಗಾರಿಕೆಎಲ್ಲವೂಇರುತ್ತದೆ.ಅವುಗಳನ್ನೆಲ್ಲ ತಾಳ್ಮೆಯಿಂದ ಕಡಿಮೆ ಸಮಯದಲ್ಲಿಯಾರು ಸರಿಯಾಗಿ ನಿರ್ವಹಿಸಿಕೊಂಡು ಹೋಗುತ್ತಾರೋಅವರೇ ನಿಜವಾದ ನಾಯಕರಾಗಿ ಹೊರಹೊಮ್ಮುತ್ತಾರೆ.
ಒಂದುಕಾರ್ಪೊರೇಟ್ ವಲಯದಿಂದ ಹಿಡಿದು ಶಿಕ್ಷಣ ಕ್ಷೇತ್ರದವರೆಗೂ ಲೀಡರ್ ಶಿಪ್ ನ ಛಾಪು ಪಸರಿಸಿದೆ.ಕಾಲೇಜಿನಲ್ಲಾಗುವಚುನಾವಣೆಯಲ್ಲಿ ಸಣ್ಣಗೆ ಪ್ರಚಾರ ಮಾಡಿ, ತಾನೆಗೆಲ್ಲಬೇಕೆಂಬ ಮಹದಾಸೆಯಿಂದಎಲ್ಲರ ಬಳಿ ಪಿಸುಮಾತಿನಲ್ಲಿಯೇಗೆಲ್ಲುವ ನಾಯಕನಿಂದ ಹಿಡಿದು ವೋಟ್ ಕೇಳಿ ಗೆಲ್ಲುವ ನಾಯಕನಿಂದ ಹಿಡಿದು ವಿಧಾನಸಭೆ, ಲೋಕಸಭೆಯಂತಹಚುನಾವಣೆಯಲ್ಲಿಗೆದ್ದು ಮಂತ್ರಿಯಾಗುವವರೆಗೂ ನಾಯಕತ್ವದಘನತೆಎದ್ದುತೋರುತ್ತದೆ. ಸಿಗುವ ಸಣ್ಣ ಅವಕಾಶಗಳನ್ನೂ ಸರಿಯಾಗಿ ಉಪಯೋಗಿಸಿ ಕೊಳ್ಳುವವನು ತನ್ನಅಭಿವೃದ್ದಿಯಜೊತೆಗೆಇತರರ ಒಳಿತಿಗೂ ಶ್ರಮಿಸುವವನುಉತ್ತಮ ನಾಯಕನಾಗುವುದರಲ್ಲಿ ಸಂದೇಹವಿಲ್ಲ.

ವಾಕ್‍ಚಾತ್ರ್ಯ
ನಾಯಕನ ಪ್ರಮುಖ ಗುಣವೇ ಇದು.ಗುಂಪಿನಲ್ಲಿರುವ ಎಲ್ಲರೊಂದಿಗೂ ಸಂವಹನ ಮಾಡುವುದರ ಮೂಲಕ ಪ್ರತಿಯೊಬ್ಬನಧ್ವನಿಗೂಕಿವಿಯಾಗಬೆಕು.ಯೋಜನೆಯನ್ನು ರೂಪಿಸುವ ಸಂಧರ್ಭದಲ್ಲಿಎಲ್ಲರ ನಿಲುವಿನೊಂದಿಗೆ, ತನ್ನ ನಿಲುವನ್ನೂ ಎಲ್ಲರಿಗೂ ಸ್ಪಷ್ಟವಾಗಿಅರ್ಥವಾಗುವರೀತಿಯಲ್ಲಿ ಹೆಳಬೆಕು.ಇಡೀಗುಂಪನ್ನು ಬೇರೆಯವರ ಮುಂದೆ ಪ್ರತಿನಿಧಿಸುವವನು ನಾಯಕನಾಗಿದ್ದರಿಂದ, ಉತ್ತಮ ಮಾತುಗಾರನಾಗಿದ್ದರೆ ಎಂತಹವರನ್ನೂ ತನ್ನತ್ತ ಸೆಳೆಯಬಲ್ಲ ಗುಣವನ್ನು ಹೊಂದಿದ್ದರೆ, ಬಹುಬೇಗನೇ ತನ್ನ ಗುರಿಯನ್ನು ತಲುಪುತ್ತಾನೆ. ಎಷ್ಟೋ ಬಾರಿ ಸಂವಹನ ಕೊರತೆಯಿಂದಲೇ ಸಮಸ್ಯೆಗಳು ಹೆಚ್ಚಾಗುತ್ತವೆ. ಗುಂಪಿನ ಎಲ್ಲರಿಗೂಅವರದ್ದೇ ವೈಯಕ್ತಿಕ ನಿಲುವುಗಳಿರುವುದ ರಿಂದಎಲ್ಲರ ಬಳಿಯೂ ಸರಿಯಾದ ರೀತಿಯಲ್ಲಿ ಮಾತನಾಡಿದರೆ, ಸಮಸ್ಯೆಗಳೆಲ್ಲ ಸುಲಭವಾಗಿ ಬಗೆಹರಿದುಬಿಡುತ್ತದೆ
ಸನ್ನಿವೇಶಕ್ಕೆ ತಕ್ಕಂತಹ ನಿರ್ಧಾರಗಳು
ಗುಂಪಿನಲ್ಲಿರುವ ಒಬ್ಬೊಬ್ಬರ ಅಭಿಪ್ರಾಯವೂ ಒಂದೊಂದು ರೀತಿಯಲ್ಲಿರಬಹುದು. ಆದರೆ ಕೊನೆಯಲ್ಲಿ ಯಾರೊಬ್ಬರ ನಡುವೆಯೂ ಮನಸ್ತಾಪವಾಗದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವವನು ನಾಯಕನಾಗಿರುತ್ತಾನೆ. ಯಾವ ಸಮಯಕ್ಕೆ, ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವಂತೂ ತುಂಬ ಮುಖ್ಯ. ಏಕೆಂದರೆ ಚಿಕ್ಕ ಪುಟ್ಟ ಸನ್ನಿವೇಶಗಳೇ ಇಡೀಟೀಂನ ಸಾಮಥ್ಯವನ್ನು ಅಳೆದುಬಿಡುತ್ತದೆ.ಕೆಲಸದ ಅಚಿತಿಮಗುರಿ, ಪ್ರಗತಿ, ಕಾರ್ಯಕ್ಷಮತೆ ಮುಂತಾದವುಗಳನ್ನು ಅವಲೋಕಿಸಿ, ಯಾರೊಬ್ಬರ ಪರ-ವಿರೋಧವನ್ನೂ ವಹಿಸದೇ ಗುಂಪಿನಲ್ಲಿರುವ ಎಲ್ಲರೂ ಸಮಾನರು ಎಂಬ ನಿರ್ಲಿಪ್ತ ಭಾವದೊಂದಿಗೆ ನಿರ್ಧಾರವನ್ನು ತೆಗೆದುಕೊಳ್ಳುವುದು ಮುಖ್ಯ.

ತಾಳ್ಮೆಯೂ ಮುಖ್ಯ
ನಾಯಕನಾದವನು ಎಲ್ಲರ ಪ್ರತಿನಿಧಿಯಾಗಿದ್ದರಿಂದ ತಾಳ್ಮೆ ಬಹಳ ಮುಖ್ಯ.ತಾಳಿದವನು ಬಾಳಿಯಾನು ಎಂಬಂತೆ, ಯಾರದ್ದೋ ಟೀಕೆ ಎದುರಾದರೆ, ಪ್ರತಿಸ್ಪರ್ಧಿಗಳು ಸವಾಲಿಗೆ, ಸಿಟ್ಟಾಗುವುದೋ ಅಥವಾಕುಗ್ಗುವುದರ ಬದಲು ತಾಳ್ಮೆಯಿಂದಲೆ ಕೆಲಸವನ್ನು ಮಾಡುವುದು ಮುಖ್ಯ.ಗುಂಪಿನ ಸಹವರ್ತಿಗಳಲ್ಲಿ ಯಾರಾದರೂತಪ್ಪು ಮಾಡಿದರೆ, ಅವರ ಮೇಲೆ ಕೂಗಾಡುವುದರ ಬದಲು ನಿಧಾನವಾಗಿಸಮಾಲೋಚನೆ ನಡೆಸಿದರೆ, ತಂಡದಇತರ ಸದಸ್ಯರಿಗೂ ನಾಯಕನ ಮೇಲೆ ಗೌರವ ಮೂಡುತ್ತದೆ.

ಆತ್ಮವಿಶ್ವಾಸ
ಗುಂಪಿನಲ್ಲಿರುವವರೆಲ್ಲ ನಿರಾಶಾವಾದಿಗಳಾಗಿದ್ದರೂ ನಾಯಕ ತನ್ನಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು.ದೊಡ್ಡ ನಷ್ವೇ ಆಗಲಿ, ಚಿಕ್ಕಪುಟ್ಟ ಮನಸ್ತಾಪಗಳೇ ಇರಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುವ ಛಲವಿದ್ದಾಗ, ಎಲ್ಲ ಕೆಲಸವೂ ಸಲೀಸಾಗಿ ಆಗುತ್ತದೆ. ಬದಲಾಗಿ ನಾಯಕನೇ ನಿರಾಶಾವಾದಿಯಂತಿದ್ದರೆ, ಅದು ಗುಪಿಂನಲ್ಲಿರುವ ಇತರ ಸದಸ್ಯರ ಮೇಲೂ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಸೋಲೇ ಗೆಲುವಿನ ಸೋಪಾನ ಎಂದು ಮುಂದುವರಿದಾಗ ಯಶಸ್ಸು ಸಿಗುತ್ತದೆ.ತಂಡದ ಎಲ್ಲರಿಗೂ ಧೈರ್ಯವನ್ನು ತುಂಬುವ ಕೆಲಸ ನಾಯಕನದ್ದೇ ಆಗಿರುತ್ತದೆ. ಇರುವ ದಾರಿಗಳೆಲ್ಲವೂ ಮುಚ್ಚಿದರೂ ಆತ ಹೊಸ ದಾರಿಯನ್ನು ಸೃಷ್ಟಿಸುತ್ತಾನೆ. ಜೀವನವೇ ಜಿಗುಪ್ಸೆಎಂಬುವವರ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುವಂತೆ ಮಾಡುತ್ತಾನೆ. ಸಂಯಮ, ಶಿಸ್ತು, ತಾಳ್ಮೆಯಿಂದ ಮುಂದುವರಿದು, ನಿಜವಾದ ಹೀರೋವಾಗಿ ರೂಪುಗೊಳ್ಳುತ್ತಾನೆ.

ನಾಯಕನೆಂದರೆ
.ಯಾವುದೇ ವಿಷಯದಲ್ಲಿಉತ್ಸಾಹ ಹೊಂದಿದ್ದು, ಇತರರನ್ನೂಉತ್ತೇಜಿಸುವವನು.
• ಎಲ್ಲ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸಿಕೊಂಡು, ಉತ್ತಮಫಲಿತಾಂಶವನ್ನು ನೀಡುವವನು.
• ಗುಂಪಿನ ಯಾವುದೇ ಸದಸ್ಯರುಉತ್ತಮ ಸಾಧನೆಯನ್ನು ಮಾಡಿದಾಗಅವರನ್ನು ಪ್ರೋತ್ಸಾಹಿಸುವವನು.
• ಜ್ಞಾನವೇ ಶಕ್ತಿಯಾಗಿದ್ದರಿಂದ, ಸಂಸ್ಥೆಯ ಯೋಜನೆಗಳನ್ನು ಧ್ಯೇಯಗಳನ್ನಿಟ್ಟುಕೊಂಡು ಮುನ್ನಡೆಯಬೇಕು.
• ಯಾರಿಗೆಯಾವ ಕೆಲಸದ ಸಾಮಥ್ರ್ಯವಿದೆಎಂಬುದರಆಧಾರದ ಮೇಲೆ, ಕೆಲಸವನ್ನು ಸಮಾನವಾಗಿ ಹಂಚಬೆಕು.
• ಕಾಲಕ್ಕೆ ತಕ್ಕಂತೆ ಅಪ್‍ಡೇಟ್‍ ಆಗುತ್ತಿರಬೇಕು.
• ಪ್ರತಿಯೊಬ್ಬರಿಗೂ ಗೌರವ ಕೊಡುವುದರ ಮೂಲಕ ವಿಶಾಲ ಮನೋಭಾವವನ್ನು ಮೆರೆಯಬೇಕು.
• ಸಮಸ್ಯೆಗಳು ಬಂದಾಗ ಅದನ್ನು ಬಗೆಹರಿಸಬೇಕು ನಿಜ, ಆದರೆ ಸಮಸ್ಯೆಗಳೇ ತಲೆದೋರದಂತೆ ನೋಡಿಕೊಳ್ಳಬೇಕು.
• ಉತ್ತಮ ನಾಯಕನು, ಒಂದು ಧ್ಯೇಯವನ್ನಿಟ್ಟುಕೊಂಡು ಗುರಿ ತಲುಪುತ್ತಾನೆ. ತಾನು ಬೆಳೆಯುವುದರ ಜೊತೆಗೆ ಇತರರ ಕಲ್ಯಾಣಕ್ಕೂ ಶ್ರಮಿಸುತ್ತಾನೆ.

ರಾಘವೇಂದ್ರ ಪ್ರಭು,ಕರ್ವಾಲು
ಉಡುಪಿ

By suddi9

Leave a Reply

Your email address will not be published. Required fields are marked *