ಸಮಾಜದಲ್ಲಿ ಹಲವಾರುಜನ ವಿವಿಧ ಸಾಧಕರುಇದ್ದಾರೆ. ಅದರಲ್ಲಿಯೂ ಆ ಸಾಧನೆಯಿಂದಲೆ ಹೆಸರು ವಾಸಿಯಾಗುವವರು ಬಹಳ ಕಡಿಮೆ ಮಂದಿ ಹೀಗಾಗಿ ಸಾಧನೆಗೆ ಸರಿಯಾದ ಮಾನ್ಯತೆದೊರೆಯದಿದ್ದರೆ ಅದು ಅಲ್ಲಿಯೇ ಕಮರಿ ಹೋಗಬಹುದು.ಆದರೆ ಉಡುಪಿ ತಾಲೂಕಿನ ಶಿರ್ವ ಸಮೀಪದ ಪೆರ್ನಾಲಿನ ರಾಜೇಶ ಪ್ರಭು ಎಂಬವರುತನ್ನ ವಿಶೇಷ ಸಾಧನೆಯಿಂದ ಇಂದು ವಿಶ್ವದಾಖಲೆ ಮಾಡುವತ್ತ ದಾಪುಗಾಲು ಹಾಕುತ್ತಿದ್ದಾರೆ.
ಹಲ್ಲು30 ಸೆಕೆಂಡ್, ಕಾಲು 46, ಉಗುರು 33 ಸೆಕೆಂಡ್‍ ಇದು ಇವರ ವರ್ಲ್ಡ ಇಂಡಿಯಾ ರೆರ್ಕಾಡ್‍ಗೆ ತೆಂಗಿನಕಾಯಿ ಸುಲಿಯುದಕ್ಕೆ ವ್ಯಯಿಸಿದ ಸಮಯ. ನಿಮಗೆ ಆಶ್ಚರ್ಯವಾಗಬಹುದು ತೆಂಗಿನಕಾಯಿಯನ್ನು  ಕತ್ತಿಯಿಂದ ಅಥವಾ ಇತರ ಸಾಧನದಿಂದ ಸುಲಿಯಲು ಕಷ್ಟ ಪಡುವ ನಾವು, ಕೇವಲ ಹಲ್ಲು,ಉಗುರು ಕಾಲಿನಿಂದ ಸಿಪ್ಪೆ ಸುಲಿಯುವುದು ದೂರದಮಾತು ಆದರೆ ರಾಜೇಶ ಪ್ರಭುರವರು ಇದನ್ನುಅತ್ಯಂತ ಚಮತ್ಕಾರದಲ್ಲಿ ಮುಗಿಸುತ್ತಾರೆ.
ಮಹಾರಾಷ್ಟ್ರದ  ನಾಸಿಕ್ ನಲ್ಲಿ 28 ಇಂಚು ಸುತ್ತಳತೆಯ 4.477 ಕೆ.ಜಿ ತೂಕದ ತೆಂಗಿನಕಾಯಿಯನ್ನು ಉಗುರು,ಕಾಲು ಮತ್ತು ಹಲ್ಲಿನಿಂದ ಸುಲಿದುದಾಖಲೆ ಮಾಡಿದ್ದಾರೆ.ಈಗಾಗಲೇ ವಿವಿಧ ಕಡೆಗಳಲ್ಲಿ ಈ ಪ್ರದರ್ಶನವನ್ನು ನೀಡಿಎಲ್ಲರಿಂದಲೂ ಪ್ರಶಂಸೆಗೆ ಪಾತ್ರಗಾಗಿದ್ದಾರೆ.ಅದರಲ್ಲಿಯೂ ಭಾರತದಲ್ಲಿ ಬರೇ ಕಾಲಿನಿಂದತೆಂಗಿನಕಾಯಿ ಸುಲಿಯುವವರು ಬಹಳ ಕಡಿಮೆಆದರೆಇವರು 3 ವಿಭಾಗದಲ್ಲಿಯೂ ಈ ಸಾಧನೆ ಮಾಡಿದಮೊದಲ ವ್ಯಕ್ತಿಯಾಗಿದ್ದಾರೆ ಹಾಗೂ ಲಿಮ್ಕಾದಾಖಲೆಯನ್ನು ಮಾಡಿರುವ ಇವರು ಗಿನ್ನೆಸ್‍ದಾಖಲೆಗಾಗಿ ಪ್ರಯತ್ನ ಮಾಡುತ್ತಿದ್ದಾರೆ.
1997 ರಲ್ಲಿ ಪ್ರಾರಂಭವಾದ ಈ ಹವ್ಯಾಸ ಅಥವಾ ದಾಖಲೆಯ ಪಯಣ ಇಂದಿನವರೆಗೆ ಸಾಗಿದೆ.ಈ ಬಗ್ಗೆ ಅವರೊಂದಿಗೆ ಮಾತನಾಡಿದಾಗ ಮೊದಲು ಬಹಳ ಕಷ್ಟವಾಗುತ್ತಿತ್ತು ಒಂದುತೆಂಗಿನಕಾಯಿಯ ಸಿಪ್ಪೆ ಸುಲಿಯಲು ಹಲ್ಲು,ಉಗುರು,ಕಾಲಿನಿಂದ ಬಹಳ ಸಮಯ ತೆಗೆದುಕೊಳ್ಳುತ್ತಿದ್ದೆ ಆದರೆ ಇಂದು ಕೆಲವೇ ಸೆಕೆಂಡುಗಳಲ್ಲಿ ಇದನ್ನು ಮಾಡಲು ಸಾದ್ಯವಾಗಿದೆ.ಮಂಗಗಳು ತಮ್ಮ ಬೆರಳನ್ನು ಉಪಯೋಗಿಸಿ ಅಥವಾ ಹಲ್ಲಿನಿಂದ ಸಿಪ್ಪೆ ಸುಲಿಯುದನ್ನು ಗಮನಿಸಿ ಯಾಕೆ ನಾನು ಪ್ರಯತ್ನ ಮಾಡಬಾರದುಎಂದುಇದನ್ನು ಪ್ರಾರಂಭಿಸಿದೆ.ಮೊದಲಿನಿಂದಲೇ ಸಾಹಸ ಕಲೆಯಲ್ಲಿ ಆಸಕ್ತಿ ಹೊಂದಿದಕಾರಣ ನನಗೆ ಇದನ್ನು ಮಾಡಲು ಸಾಧ್ಯವಾಯಿತು ಎಂದು ಅವರು ಹೇಳುತ್ತಾರೆ.

51

1508555_836832959762671_8483598872305841648_n
11659333_815732301872737_7143894671878919406_n
ಇದಲ್ಲದೆ 2 ಕೈಯಿಂದಲೂಕನ್ನಡಿ ಬರಹವನ್ನು ಬರೆಯಬಲ್ಲರು ಇವರು.ಸಾಮಾನ್ಯ ಹಳ್ಳಿ ಪ್ರದೇಶದಲ್ಲಿ ಬೆಳೆದರೂ ಸ್ಥಳೀಯ ಜನರ ಪ್ರೇರಣೆಯಿಂದ ಈ ಸಾಧನೆ ಸಾದ್ಯವಾಯಿತು ಎನ್ನುತ್ತಾರೆ.
ಮಂಗಳೂರಿನ ಖಾಸಗಿ ಟ್ರಾವೆಲ್ಸ್ ನಲ್ಲಿಉದ್ಯೋಗ ಮಾಡುತ್ತಿರುವಇವರು ಇದನ್ನು ಹವ್ಯಾಸವನ್ನಾಗಿ ಮಾಡಿದ್ದಾರೆ. ಮನೆಯಲ್ಲಿತೆಂಗಿನಕಾಯಿ ಸುಲಿಯಲು ಕತ್ತಿ ಸಿಗದಿದ್ದಾಗ ಅವರು ಬರೇ ಕೈಯಿಂದ ಸಿಪ್ಪೆ ಸುಲಿದು ಮನೆಯವರಿಗೆ ಸಹಾಯ ಮಾಡುತ್ತಾರೆ…
60 ಕೆ.ಜಿ ಭಾರವನ್ನು ಹಲ್ಲಿನಿಂದ ಎತ್ತುವುದು ಮುಂತಾದ ಸಾಹಸವನ್ನುಅವರು ಮಾಡಬಲ್ಲರು.ಈಗಾಗಲೇ ವರ್ಲ್ಡರೆಕಾರ್ಡ್ ಇಂಡಿಯಾಕ್ಕೆ ಸೇರ್ಪಡೆಯಾದ ಇವರು ಪ್ರವಾಸ ಹೋದ ಕಡೆಗಳಲ್ಲಿ ರಂಜನೆಗಾಗಿಈ ರೀತಿಯ ಪ್ರದರ್ಶನ ಮಾಡುತ್ತಾರೆ.29 ಸೆಕೆಂಡ್ ನಲ್ಲಿಹಲ್ಲಿನಿಂದತೆಂಗಿನಕಾಯಿ ಸುಲಿದಿರುವುದು ಈಗಿನ ದಾಖಲೆಯಾಗಿದೆ.ಇದನ್ನುಇವರು ಮಾಡಬಲ್ಲರುಆದರೆಅದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿದೆ. ಅಷ್ಟೋಂದು ಹಣವನ್ನು ಹಣವನ್ನು ಹೋಂದಾಣಿಕೆ ಮಾಡುವುದು ಕಷ್ಟವಾಗಿದೆ ಎನ್ನುತ್ತಾರೆ.
ದಾನಿಗಳು ಮುಂದೆ ಬಂದರೆ ಗಿನ್ನಸ್‍ದಾಖಲೆ ಖಂಡಿತವಾಗಿಯೂ ಮಾಡುದಾಗಿ ಹೇಳುವ ಅವರು ತನ್ನ ಈ ರೀತಿಯ ಸಾಧನೆಗೆ ಹಳ್ಳಿಯ ಪರಿಸರಕಾರಣವಾಗಿದೆ ಪಟ್ಟಣ ಪ್ರದೇಶವಾದರೆ ನಾನು ಈ ಸಾಧನೆ ಮಾಡಲಾಗುತ್ತಿರಲ್ಲಿಲ್ಲ ಇಲ್ಲಿರುವ ವಾತಾವರಣ ಮತ್ತು ಕಾಡು ಮಂಗಗಳು ನನಗೆ ಪ್ರೇರಣೆ ಎನ್ನುತ್ತಾರೆ.
ಈಗಾಗಲೇ ಅವರು ದೇಶದ ವಿವಿಧ ಕಡಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಶ್ರೀ.ಕ್ಷೇತ್ರ.ಧರ್ಮಸ್ಥಳ.ಗ್ರಾಮಾಬಿವೃದ್ದಿ ಯೋಜನೆಯ ಒಕ್ಕೂಟಗಳ ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿರುವ ಇವರಿಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿ ಅಲ್ಲದೆ ಇವರು ಈ ದಾಖಲೆಯನ್ನುಆದಷ್ಟು ಬೇಗನೇ ನೆರವೇರಿಸಿ ದೇಶಕ್ಕೆಕೀರ್ತಿತರಲಿ ಎಂಬ ಹಾರೈಕೆ ನಮ್ಮದು.

-ರಾಘವೇಂದ್ರ ಪ್ರಭು ಕರ್ವಾಲು,ಉಡುಪಿ

By suddi9

Leave a Reply

Your email address will not be published. Required fields are marked *