ಭತ್ತದ ಬೇಸಾಯದಲ್ಲಿ ನಮ್ಮರಾಜ್ಯ ಹೆಸರುವಾಸಿಯಾಗಿದೆ.ಹೆಚ್ಚಿನ ರೈತರು ಭತ್ತವನ್ನು ಹಳೆ ಮಾದರಿಯಲ್ಲಿ ಬೆಳೆಸುವುದು ಸಾಮಾನ್ಯವಾಗಿದೆ.ಆದರೆ ಬದಲಾದ ವ್ಯವಸ್ಥೆಯಲ್ಲಿ ಭತ್ತವನ್ನು ವಿಶೇಷವಾಗಿ ಬೆಳೆಸುದರಿಂದ ಹೆಚ್ಚಿನ ಇಳುವರಿ ಪಡೆಯಬಹುದೆಂದು ವಿಜ್ಷಾನಿಗಳು ಸಂಶೋಧನೆಯ ಫಲವಾಗಿ ಕಂಡುಕೊಂಡಿದ್ದಾರೆ.ಭತ್ತದ ಬೇಸಾಯದಉನ್ನತಿಕರಣ ಪದ್ದತಿಯನ್ನು ಮೊದಲ ಬಾರಿಗೆ ಮಡಗಾಸ್ಕರ್ದೇಶದಲ್ಲಿಅಭಿವೃಧಿ ಪಡಿಸಲಾಯಿತು.ಇದಕ್ಕೆ ಮಡಗಾಸ್ಕರ್ ಭತ್ತ ಬೆಳೆಯುವ ವಿಧಾನವೆಂದು ಹೆಸರಿದೆ.ಈ ಪದ್ದತಿಯಲ್ಲಿ ಮಾಮೂಲು ಭತ್ತದ ಬೆಳೆಗೆ ಬಳಸುದಕ್ಕಿಂತ ಕಡಿಮೆಅಂದರೆಅರ್ಧರಾಸಾಯನಿಕಗೊಬ್ಬರ ಮತ್ತುಅತೀ ಹೆಚ್ಚು ಸಾವಯವಗೊಬ್ಬರ ಬಳಸಿ ಬೆಳೆಯನ್ನು ಬೆಳೆಯಲಾಗುತ್ತದೆ.”ಶ್ರೀ”ಪದ್ದತಿಯಲ್ಲಿ ಬೆಳೆದ ಒಂದೊಂದು ಸಸಿಯು ಅತಿ ಹೆಚ್ಚು ಬೆರುಗಳ ಸಮೂಹ ಹಾಗೂ ಸದೃಡವಾz ಮತ್ತು ಬಲವಾದ ಹಿಳ್ಳೆಗಳನ್ನು ಹೊಂದಿರುತ್ತದೆ.

ಬೇಜದಆಯ್ಕೆ ವಿಧಾನ::-ಸೂಕ್ತವಾದಅತಿ ಹೆಚ್ಚು ಇಳುವರಿ ಕೊಡುವ ಹಾಗೂ ರೋಗ ನಿರೋಧಕ ಶಕ್ತಿ ಹೊಂದಿರುವ ತಳಿ ಬೀಜವನ್ನುಅಯ್ಕೆ ಮಾಡುವುದು.ಒಂದುಎಕರೆಗೆ ಬೇಕಾದಒಂದುಕೆ.ಜಿಉತ್ತಮ ಬೀಜವನ್ನು 24 ಗಂಟೆ ನೀರಿನಲ್ಲಿ ನೆನೆಸಿಡಬೇಕು.ನಂತರ ನೀರಿನಿಂದ ಬೇಜವನ್ನು ಹೊರತೆಗೆದುಗೋಣಿಚೀಲದಲ್ಲಿ ಬಿಯಾಗಿಕಟ್ಟಿಒಂದು ದಿನ ಬೆಚ್ಚಿಗಿನ ಪ್ರದೇಶದಲ್ಲಿಇಟ್ಟು ಮೊಳಕೆ ಬರಿಸಬೇಕು.ಅಲ್ಲದೆಉಪ್ಪು ನೀರಿನದ್ರಾವಣ ಮೂಲಕ ಜೊಳು ಬೀಜವನ್ನು ಬೇರ್ಪಡಿಸಬಹುದಾಗಿದೆ.ಸಸಿ ಮಡಿತಯಾರಿಕ್ರಮ:-ಒಂದುಎಕರೆಗೆ ಬೇಕಾಗುವ ನರ್ಸರಿತಯಾರಿಸಲು ಕನಿಷ್ಟ 40 ಚ.ಮೀ ಸ್ಥಳ ಬೇಕಾಗುತ್ತದೆ.ಚೆನ್ನಾಗಿ ಕೊಳೆತ ಸಾವಯವಗೊಬ್ಬರ(ಹಟ್ಟಿಗೊಬ್ಬರ,ಸ್ವಲ್ಪಎರೆಗೊಬ್ಬರ)ಹಾಕಿ ತೇವಾಂಶಇರುವಾಗ ಉಳುಮೆ ಮಾಡಿ ಮಣ್ಣಿಗೆ ಸೇರಿಸಬೇಕು.
ಹದಗೊಳಿಸಿದ ನರ್ಸರಿ ಸ್ಥಳದಲ್ಲಿ 1ಮೀ. ಅಗಲ ಹಾಗೂ 20 ಮೀ ಉದ್ದದ2 ಸಸಿ ಮಡಿಯು 1 ಎಕರೆಗ ಬೇಕಾದ ಸಸಿಗಳನ್ನು ಬೆಳೆಯಲು ಸಾಕಾಗುತ್ತದೆ.ಹದಗೊಳಿಸಿದ ಸಸಿ ಮಡಿಗಳನ್ನು ಸಮತಟ್ಟು ಮಾಡಿಕೊಂಡುಸುಮಾರುಅರ್ಧಇಂಚಿನಷ್ಟು ಸಾವಯವಗೊಬ್ಬರವನ್ನುಚೆನ್ನಾಗಿ ಹರಡಬೇಕು.ಒಂದು ಮಡಿಗೆಒಂದುಕಿ.ಜಿಯಂತೆ 2 ಮಡಿಗೆ 2 ಕೆ.ಜಿಯಂತೆ ಮೊಳಕೆ ಬರಿಸಿದ ಬಿತ್ತನೆ ಬೀಜವನ್ನುಚದುರಿದಂತೆ ಬಿತ್ತನೆ ಮಾಡಬೇಕು.ಒಂದು ಬೀಜದ ಮೇಲೆ ಮತ್ತೊಂದು ಬೀಜ ಬೀಳದಂತೆ ಎಚ್ಚರ ವಹಿಸುವುದುಅಗತ್ಯ,ನಂತರ ಪುನಃ ಅರ್ಧ ಇಂಚು ಕಳಿತ ಸಾವಯವಗೊಬ್ಬರವನ್ನು ಹರಡಬೇಕು.ಸೂರ್ಯನ ನೇರ ಶಾಖ ಹಾಗೂ ಪಕ್ಷಿಗಳಿಂದ ಹಾನಿಯನ್ನುತಪ್ಪಿಸಲು ಭತ್ತದ ಹುÀಲ್ಲಿನಿಂದ ಹೊದಿಕೆ ಹಾಕಬೇಕು.ಸಸಿ ಮಡಿಗೆ ಸಾವಯವಗೊಬ್ಬರದ ಹೊರತಾದಿ ಇತರೆಗೊಬ್ಬರ ಹಾಕುವ ಅಗತ್ಯವಿಲ್ಲ.3-4 ದಿನಗಳಲ್ಲಿ ಹೊದಿಸಿದ ಹುಲ್ಲನ್ನು ಮೊಳಕೆ ಬೀಜಗಳಿಗೆ ಹಾನಿಗಾಗದರೀತಿಯಲ್ಲಿತೆಗೆದು ಹಾಕಬೇಕು.ಸಸಿ ಮಡಿಗೆ ಬೆಳ್ಲಿಗೆ ಮತ್ತು ಸಂಜೆ ಬೀಜಗಳಿಗೆ ಹಾನಿಯಾಗದರೀತಿಯಲ್ಲಿ ನೀರು ಹಾಕಬೇಕು.ಹೀಗೆ ಮಾಡುದರಿಂದ 8-12 ದಿನಗಳಲ್ಲಿ ಸದೃಢವಾದ ಬಲವಾದ ಸಸಿಗಳು ನಾಟಿಗೆ ಲಭ್ಯವಾಗುತ್ತದೆ.
ಗದ್ದೆಯಲ್ಲಿ ನಾಟಿ:-ಸಸಿ ಮಡಿಯನ್ನುತಯಾರಿಸುತ್ತಿದ್ದಂತೆ ನಾಟಿ ಮಾಡಲುಗದೆಯನ್ನು ಸಾಮಾನ್ಯ ಪದ್ದತಿಯಂತೆಎಕರೆಗೆ 4 ಟನ್ ಕೊಳೆತ ಕಾಪೋಸ್ಟ್ಗೊಬ್ಬರ ಹಾಕಿ ಚಿನ್ನಾಗಿ ಹದ ಬರುವರೆಗೆ ಉಳುಮೆ ಮಾಡಬೇಕು.ನಂತರ 2 ಮೀ.ನಷ್ಟು ಎರು ಮಡಿ ಮಾಡಿಅದರಲ್ಲಿ 25*25 ಸೆ.ಮಿ ಅಮತರದಲ್ಲಿ ಗುರುತುಗಳನ್ನು ಹಗ್ಗದ ಸಹಾಯದಿಂದಅಥವಾ ಮಾರ್ಕರ್ ಸಹಾಯದಿಂದ ಮಾಡಬೀಕು.ಸಸಿ ಮಡಿಯಿಂದ ಸಸಿ ತೆಗೆದು ನೇರವಾಗಿಅಂತರ ಪ್ರಕಾರ ನಾಟಿ ಮಾಡಬೇಕು.ಒಂದು ಸಸಿಯಿಂದ ಸುಮಾರು 80 ರಿಂದ 100 ಹಿಳ್ಲೆ ಬರುತ್ತದೆ.
ಕಳೆ ನಿಯಂತ್ರಣ:-25*25 ಸೆ.ಮಿ ಅಂತರದಲ್ಲಿ ನಾಟಿ ಮಾಡುದರಿಂದ ಪ್ರತಿ ಸಸಿ ಯ ಬೇರಿನ ಬೆಳವಣಿಗೆಗೆ ಹಾಗೂ ಹೆಳ್ಲೇ ಒಡೆಯುದಕ್ಕೆ ಅನುಕೂಲವಾಗುವುದು.ಸೂರ್ಯನ ಬೆಳಕು ಎಲ್ಲಾ ಗಿಡಗಳಿಗೂ ಸಮನಾಗಿ ಬೀಳುತ್ತದೆ.ಗಾಳಿ ಹಾಗೂ ಸಸ್ಯ ಪೋಷಕಾಂಶ ಚೆನ್ನಾಗಿದೊರೆಯುತ್ತದೆ.ಈ ಪದ್ದತಿಯಲ್ಲಿ ನೀರಿನ ಬಳಕೆ ಕಡಿಮೆ ನೀರನ್ನುಅನ್ಅಫ್ರೀತಿಯಲ್ಲಿ ಬಿಡಬೇಕಾಗುತ್ತದೆ.ಕೋನೋವಿಡರ್ ಬಳಸಿ ಕಳೆ ಹತೋಟಿ ಮಾಡಬೇಕಾಗುತ್ತದೆ.ಈಯಂತ್ರವನ್ನು ಬಳಸುದರಿಂದ ಕಳೆಗಳನ್ನು ಮಣ್ನಿಗೆಸೇರಿಸಿದಂತಾಗಿ ತನ್ಮೂಲಕ ಸಾವಯವಅಂಶವನ್ನುಕೊಟ್ಟಂತಾಗುತ್ತದೆ.ಇದಲ್ಲದೆ ಸಸಿಗಳ ಬುಡದಲ್ಲಿ ಗಾಳಿಯಾಡುವಿಕೆಗೆ ಅನುಕೂಲ ಮಾಡಿದಂತಾಗುತ್ತದೆ.ಬೇರುಗಳ ಬೆಳವಣೆಗೆಗ ಸಹಕಾರಿಯಾಗುತ್ತದೆ.ಈಎಲ್ಲಾ ಕಾರಣಗಳಿಂದ ಕೋನೋವೀಡರನ್ನು ನಾಟಿ ಮಾಡಿದ ನಂತರ ಪ್ರತಿ 10 ದಿನಗಳಿಗೊಮ್ಮೆ ಕನಿಷ್ಟ 4 ಬಾರಿ ಬಳಸಿ ಕಳೆ ನಿಯಂತ್ರಣ ಮಾಡಬಹುದು.
ನೀರು ನಿರ್ವಹಣೆ:-ಭತ್ತದ ಬೆಳೆಯನ್ನು ನೀರು ನಿಲ್ಲಸಿ ಬೆಳೆಯುವುದು ಸಾಮಾನ್ಯ ಪದ್ದತಿ.ಭತ್ತವು ನಿಂತ ನೀರಿನಲ್ಲಿ ಬೆಳೆಯುವ ಗುಣಹೊಂದಿರುತ್ತದೆ.ನೀರು ನಿಲ್ಲುವುದರಿಂದ ಕೆಳಸ್ತರದ ಮಣ್ಣಿನಗುಣಕೆಟ್ಟು ಮೇಲಪ್ದರದ ಮಣ್ನಿ ಸುಧಾರಣೆ ಆಗುದಿಲ್ಲ.ಹೂವು ಬಿಡುವ ಹಂತದಲ್ಲಿ ಸಸ್ಯದ ಮುಕ್ಕಲು ಭಾಗ ಬೇರು ನಿಶ್ಯಕ್ತವಾಗಿ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ.ಮಣ್ನಿನತೇವಾಂಶರಕ್ಷಿಸಲುಅಗತ್ಯವಿರುವಷ್ಟು ನೀರನ್ನು ನೀಡಬೇಕು.
ಕೀಟ ಮತ್ತುರೋಗದ ಹತೋಟಿ:-ಈ ಪದ್ದತಿಯಲ್ಲಿಕೀಟ ಮತ್ತು ರೋಗಗಳ ಬಾಧೆಕಡಿಮೆಆದರೂ ಬಂದಲ್ಲಿ ಸಮಗ್ರರೋಗ ಮತ್ತುಕೀಟ ನಿರ್ವಹಣಾಕ್ರಮ ಕೈಗೊಳ್ಳಬಹುದು.
ಈ ಪದ್ದತಿಯ ಬಗ್ಗೆ ಮೊದಲಿಗೆ ಹೆಚ್ಚಿನಜನರಿಗೆತಪ್ಪುಕಲ್ಪನೆಇತ್ತು ನಂತgದ ದಿನಗಳಲ್ಲಿ ಇದರ ಬಗ್ಗೆ ಜನರಿಗೆ ಮನವರಿಕೆಯಾಗಿಇಂದು ಹೆಚ್ಚಿನ ಕುಟುಂಬಗಳಲ್ಲಿ ಶ್ರೀ ಪದ್ದತಿಯನ್ನು ಅನುಸರಿಸಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.ನಬಾರ್ಡ ಬ್ಯಾಂಕ್ಕೂಡಇದಕ್ಕೆ ಹೆಚ್ಚಿನಆದ್ಯತೆ ನೀಡುತ್ತಿರುವುದು ಗಮನಾರ್ಹ.ಶ್ರೀ.ಕ್ಷೇ.ಧ.ಗ್ರಾ.ಯೋಜನೆಯು ಕೂಡ ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ಹೆಚ್ಚಿನರೈತರನ್ನು ಇದಕ್ಕೆಅಳವಡಿಸಲು ಶ್ರಮ ವಹಿಸುತ್ತಿದೆ.ಅಲ್ಲದೆ ಪ್ರಾತಕ್ಷಿಕೆಯನ್ನುಕೂಡ ನಡೆಸಿ ರೈತರನ್ನು ಈ ಬಗ್ಗೆ ಶಿಕ್ಷಿತರನ್ನಾಗಿ ಮಾಡುತ್ತಿರುವುದುಅಭಿನಾಂದನಾರ್ಹ.
ಶ್ರೀ ಪದ್ದತಿಯನ್ನು ಅನುಸರಿಸಿ ಕಬ್ಬನ್ನುಕೂಡ ನಾಟಿ ಮಾಡಬಹುದಾಗಿದೆ.ಆದುನಿಕ ಕೃಷಿ ಪದ್ದತಿಯಲ್ಲಿ “ಶ್ರೀ “ಭತ್ತದ ಬೇಸಾಯಒಂದುಉತ್ತಮ ನಡೆಯಾಗಿದೆ.
ರಾಘವೇಂದ್ರ ಪ್ರಭು, ಕರ್ವಾಲು
