ಮಂಗಳೂರು: ಇತ್ತೀಚಿನ ದಿನಗಳಲ್ಲಿ ತುಳು ಚಿತ್ರ ರಂಗವು ಯಾವ ಚಿತ್ರರಂಗಕ್ಕೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಬೆಳೆದು ನಿಂತಿದೆ. ಶುಕ್ರವಾರವೆಂದರೆ ಕೊಸ್ಟಲ್ ವುಡ್ ನ ಒಂದಲ್ಲ ಒಂದು ಚಿತ್ರ ಬೆಳ್ಳಿ ತೆರೆಗೆ ಬರುವುದು ನಿಶ್ಚಿತ ಹಾಗೂ ತುಳು ಚಿತ್ರರಂಗವು ಅನೇಕ ಪ್ರತಿಭೆಗಳನ್ನು ಬೆಳೆಸಿದೆ ಮತ್ತು ಕನ್ನಡ ಇತರೆ ಚಿತ್ರ ರಂಗಕ್ಕೆ ಪರಿಚಯಿಸಿದೆ ಎಂಬುವುದು ಹೆಮ್ಮೆಯ ವಿಷಯ.

IMG-20160623-WA0002
IMG-20160623-WA0003

IMG-20160623-WA0004

IMG-20160623-WA0005 (1)

IMG-20160623-WA0006

IMG-20160623-WA0007

IMG-20160623-WA0008

IMG-20160623-WA0001
ಇತ್ತಿಚೇಗೆ ಬಂದ ತುಳು ಚಿತ್ರದ ಮೂಲಕ ಪರಿಚಯವಾದ ಕರಾವಳಿ ತೀರದ ಪ್ರತಿಭೆ ” ಶ್ರುತಿ ಕೋಟ್ಯಾನ್”, 19 ವಸಂತದಲ್ಲಿರುವ ಈಕೆ ತಂದೆ ಶ್ರೀನಿವಾಸ ಮತ್ತು ಶ್ರೀಮತಿ ಪ್ರಭಾ ದಂಪತಿಗಳ ಪುತ್ರಿ. ಪ್ರಥಮ ವರ್ಷದ ಬಿ. ಬಿ.ಎಂ ವಿಧ್ಯಾರ್ಥಿನಿಯಾಗಿದ್ದು ಈಕೆ ನೃತ್ಯ, ಅಭಿನಯ ಹಾಗೂ ನೃತ್ಯ ನಿರ್ದೇಶನದಲ್ಲಿ ಪರಿಣತೆ ಹೊಂದಿದ್ದು, ಅದರಲ್ಲೂ ಅಭಿನಯೆಂದರೆ ಈಕೆಗೆ ಬಲು ಇಷ್ಟವಂತೆ.
ನಟ ಹಾಗೂ ನಿರ್ದೇಶಕ ಸಾಯಿಕೃಷ್ಣರ ನಿರ್ದೇಶನದಲ್ಲಿ ಮೂಡಿ ಬಂದ “ಸೂಂಬೆ “ ಚಿತ್ರ ಈಕೆಯನ್ನು ತುಳು ಚಿತ್ರ ರಂಗಕ್ಕೆ ಪರಿಚಯ ಮಾಡಿತು. ಈ ಚಿತ್ರದಲ್ಲಿ ತಂಗಿಯ ಪಾತ್ರದಲ್ಲಿ ತನ್ನ ಅಭಿನಯದ ಮೂಲಕ ಮಿಂಚಿದರೊಂದಿಗೆ ಈಕೆಯ ಯಶಸ್ಸಿನ ಬಾಗಿಲು ತೆರೆಯಿತು.

ನಂತರ ದಿನಗಳಲ್ಲಿ “ರಂಬಾರೊಟ್ಟಿ” ಮತ್ತು “ಮಾರ್ನಮಿ” ತುಳು ಚಿತ್ರಗಳಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡರು.ಇದಲ್ಲದೆ ಇವರ ಅಭಿನಯಕ್ಕೆ ಕನ್ನಡ ಚಿತ್ರರಂಗ ಅಂದರೆ ಸ್ಯಾಂಡಲ್ ವುಡ್ ನಿಂದಲು ಅವಕಾಶಗಳ ಸುರಿಮಳೆಹರಿಯಿತು. ಅದರಲ್ಲಿ “ರಂಗನ್ ಲವ್ ಸ್ಟೋರಿ”, “ದಂಡೆ “, ” ಒಂದನೇ ತರಗತಿ ” , “ಲವ್ ಕಾ ಗುಂಭಾಜ್”, ಮುಂತಾದ ಚಿತ್ರಗಳಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ ಸದ್ಯದಲ್ಲೆ ಈ ಚಿತ್ರಗಳು ತೆರೆ ಕಾಣಲಿದೆ.

ಸದ್ಯ ಒಂದು ತೆಲುಗು ಮತ್ತು ಎರಡು ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದ್ದು ಈಕೆಯ ಕೊಸ್ಟಲ್ ವುಡ್ ನಿಂದ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ವರೆಗೆ ಬೆಳೆಯಲು ತನ್ನ ತಂದೆ ತಾಯಿಯ ಪ್ರೋತ್ಸಾಹವೇ ಕಾರಣವೆಂದಿದ್ದಾರೆ. ಹಾಗೇಯೆ ಈಕೆಯ ಸಿನಿಪ್ರಯಾಣವು ಬೆಟ್ಟದಷ್ಟು ಎತ್ತರಕ್ಕೆ ಬೆಳೆಯಲಿ ಎಂದು……

ಸುದ್ದಿ9 ಮೀಡಿಯದ ಹಾರೈಕೆ

By suddi9

Leave a Reply

Your email address will not be published. Required fields are marked *