ಮಾತು ಎಂಬ ಈ ಎರಡಕ್ಷರದ ಪದ ಜಗತ್ತಿನಲ್ಲಿವಿಶಿಷ್ಟವಾದ ಸ್ಥಾನವನ್ನುಪಡೆದಿದೆ.ವ್ಯಕ್ತಿ-ವ್ಯಕ್ತಿಗಳ ನಡುವಿನ ವ್ಯವಹಾರದ ಮಾಧ್ಯಮವಾಗಿ ಸಿಹಿ-ಕಹಿಗಳ ಹಂಚಿಕೆಯ ಸೇತುವೆಯಾಗಿ ಈ ಮಾತಿನಿಂದಜಗತ್ತನ್ನುಚಿಕ್ಕದಾಗಿಸಿದೆ.ಒಂದುಕಡೆ ಮಾತಿನಿಂದ ಸುಖ ,ಶಾಂತಿ,ನೆಮ್ಮದಿದೊರಕಿದರೆ ಮತ್ತೊಂದೆಡೆಇದೇಮಾತು ಬಡತನ, ಅಶಾಂತಿ,ಯುದ್ಧ, ದ್ವೇಷದ ಕಿಡಿಉದ್ಭವಿಸುತ್ತದೆ. ಮಾತು ಮಾಣಿಕ್ಯಕ್ಕಿಂತಲೂ ಅಮೂಲ್ಯವಾದುದು.ಮಾತುಆಡಿದರೆಹೋಯಿತು, ಮುತ್ತುಒಡೆದರೆ ಹೋಯಿತು ಎಂಬಮಾತಿನಂತೆ ನಮ್ಮಮಾತುಅಷ್ಟೊಂದು ಪರಿಣಾಮಕಾರಿಯಾಗಿರಬೇಕು.ಅಂದರೆ ಮಾತಿನ ಏಟುಬಾಣದ ಏಟಿಗಿಂತಲೂ ತೀಕ್ಷ್ಣವಾದುದು.ಒಳ್ಳೆಯಮಾತನ್ನುಬಲ್ಲವರು ಆಣಿಮುತ್ತಿನಂತೆ ಎಂದಿದ್ದಾರೆ.ಅಂದರೆ ಉತ್ತಮವಾದಮಾತು ಗೆಳೆತನವನ್ನುಮುತ್ತಿನಂತೆ ಪೋಣಿಸುತ್ತದೆ.ಉತ್ತಮವಾದ ಮಾತುಸ್ವರ್ಗವನ್ನುಸೃಷ್ಟಿಸಿದರೆ, ಅದೇಕೆಟ್ಟಮಾತುನರಕವನ್ನುಸೃಷ್ಟಿಸುತ್ತದೆ.

ಒಬ್ಬ ಮನುಷ್ಯನ ವ್ಯಕ್ತಿತ್ವವನ್ನುಅಳೆಯಬೇಕಾದರೆ ನಮಗೆಸಹಕಾರಿಯಾಗುವುದು ಅವನಮಾತುಮಾತ್ರ. ನಾವುಅಪರಿಚಿತರೊಡನೆ ಮಾತಾಡುವಾಗ ಉತ್ತಮವಾದಮಾತನ್ನು ಆಡಿದರೆಅವರಮನಸ್ಸನ್ನುಗೆದ್ದುಅವರನ್ನುನಾವು ನಮ್ಮಬಾಳಿನ ಉತ್ತಮಸ್ನೇಹಿತರನ್ನಾಗಿ ಮಾಡಬಹುದು. ಅದೇರೀತಿಕೆಟ್ಟಮಾತುಅವರನ್ನುದ್ವೇಷಿಗಳನ್ನಾಗಿಪರಿವರ್ತಿಸಬಹುದು.ವಿದ್ಯಾರ್ಥಿಗಳಿಗಂತೂಮಾತುಅತೀಮುಖ್ಯವಾದುದು, ಏಕೆಂದರೆತನ್ನಮಾತಿನಮೂಲಕ ವಾಗಿಗುರುಹಿರಿಯರ ವಿಶೇಷವಾದ ಕೃಪೆಅವನಮೇಲೆಸದಾ ಇರುತ್ತದೆ.ನಂತರ ಅದರಮೂಲಕಗುರುಗಳ ಹೃದಯವನ್ನುಗೆದ್ದುಗುರುಗಳನ್ನುಸ್ನೇಹಿತರಂತೆ ಕಾಣಬಹುದು.ಪ್ರೇಮಿಗಳಿಗಂತೂ ಮಾತುವಜ್ರಕ್ಕಿಂತಲೂ ಶ್ರೇಷ್ಠವಾದುದು.ತನ್ನವಿಶೇಷವಾದಪದಗಳನ್ನುಬಳಕೆಮಾಡಿಜೋಡಿಸಿ ಅದನ್ನುಮಾತಿನ ಮೂಲಕವ್ಯಕ್ತಪಡಿಸಿದರೆಪ್ರೇಮಿಗಳುಅದರಲ್ಲಿಯೂಪ್ರಿಯತಮೆಮತ್ತಷ್ಟುಪ್ರೀತಿಹೊರಹೊಮ್ಮಿಚೆಲುಮೆಯಾಗಬಹುದು ಅಥವಾ ಅದೇ ಮಾತು ಪ್ರೇಮಿಗಳನ್ನುದೂರಮಾಡಬಹುದು. ಈ ಮಾತನ್ನುನಾವುವಿದ್ಯುಚ್ಛಕ್ತಿಗೆಹೋಲಿಸಬಹುದು.ಅದರಿಂದಮನೆಯನ್ನುಬೆಳಗಿಸಬಹುದುಅಥವಾಮನೆಯನ್ನುಕತ್ತಲೂಮಾಡಬಹುದು.ಅಂದರೆಮನೆಯನ್ನುಸುಟ್ಟುಹಾಕಬಹುದು.ಅದೇರೀತಿಯಲ್ಲಿಮಾತಿನಪ್ರಭಾವದಿಂದಮೇಲೇರಲೂಬಹುದು, ಅಧೋಲೋಕಕ್ಕೆಬೀಳಲೂಬಹುದು.

“ಮಾತುಬಲ್ಲವನಿಗೆಜಗಳವಿಲ್ಲ,ಊಟಬಲ್ಲವನಿಗೆರೋಗವಿಲ್ಲ” . ನಾವುಈಗ ದಿನನಿತ್ಯ ಕಾಣುವ ಜಗಳಗಳಿಗೆಮಾತೇಮುಖ್ಯಕಾರಣವಲ್ಲವೆ?ಮಾತಿನಲ್ಲಿನಮ್ರತೆಯಿದ್ದರೆಅದುಶತ್ರುವನ್ನುಮಿತ್ರನನ್ನಾಗಿಸುತ್ತದ.ದ್ವೇಷಕ್ಕೆಮಾತೇಮೂಲಕಾರಣ.ಸ್ವಾಮಿವಿವೇಕಾನಂದ,ಗಾಂಧಿಜಿಯವರುದೇಶದಜನರಮನಸ್ಸನ್ನುಗೆದ್ದದ್ದುತಮ್ಮಮಾತಿನಪ್ರಭಾವದಿಂದಲೇ.ಭಗವಾನ್ಬುದ್ಧನುಅಂಗುಲಿಮಾಲನನ್ನು ಕಂದಾಎಂದುಕರೆದು ಆತನಹೃದಯವನ್ನುಗೆದ್ದುಆತನನ್ನುಕುಕೃತ್ಯಗಳಿಂದಪಾರುಮಾಡಿಮಾನವೀಯಗುಣಗಳನ್ನುನೀಡಿಮಾನವನನ್ನಾಗಿಮಾಡಿದಪವಾಡ ಮಾತಿನಮಹತ್ವಕ್ಕೆ ಸಾಕ್ಷಿಯಾಗಿದೆ. ಮಾತುಹೊರಡುವುದು ನಾಲಗೆಯಿಂದಲ್ಲವೇ? ಆದ್ದರಿಂದ ದಾಸರು“ ಆಚಾರವಿಲ್ಲದನಾಲಗೆ ನಿನ್ನನೀಚ ಬುದ್ಧಿಯ ಬಿಡುನಾಲಗೆ ’’ ಎಂದಿದ್ದಾರೆ. ಆದ್ದರಿಂದನಮ್ಮನಾಲಗೆಯ ಮೇಲೆನಮ್ಮಹತೋಟಿ ಅತೀಮುಖ್ಯ. ಮಾತುನಮ್ಮಇಹ – ಪರಜೀವನದ ಸಾರ ಹಾಗೂ ಸರ್ವಸ್ವ.

ರಾಘವೇಂದ್ರಪ್ರಭು ,ಕರ್ವಾಲು

By suddi9

Leave a Reply

Your email address will not be published. Required fields are marked *