ಕೈಕಂಬ: ಇಂದಿನ ಪೀಳಿಗೆಯ ಮನಸ್ಥಿತಿಯ ಸುತ್ತ ಹೆಣೆಯಲಾದ ಕಥಾ ಹಂದರವನ್ನು ಹೊಂದಿರುವ ನೂತನ ಕನ್ನಡ ಕಿರು ಚಲನ ಚಿತ್ರ `ಚದುರಂಗ’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪನ್ನು ಮೂಡಿಸಿ ಇಂದಿನ ಜನಾಂಗದ ಕಣ್ತೆರೆಸಲಿ. ಯಾಕೆಂದರೆ ಈ ಕಿರುಚಲನಚಿತ್ರವು ಇಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ರವಾನಿಸಲಿದೆ ಎಂದು ಚದುರಂಗ ಕಿರು ಚಲನಚಿತ್ರದ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ತಿಳಿಸಿದ್ದಾರೆ.
ಅವರು ಬುಧವಾರ ಗಂಜಿಮಠ ದೇವಸ್ಥಾನದ ಆವರಣದಲ್ಲಿ ನಡೆದ `ಚದುರಂಗ’ ಎನ್ನುವ ಕನ್ನಡ ಕಿರು ಚಲನಚಿತ್ರದ ಮಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರದ ಬಗ್ಗೆ ಮಾತಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ನಾಟಕ, ಯಕ್ಷಗಾನ, ಸಾಂಸ್ಕøತಿಕ ರಂಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದೆ. ಈ ರೀತಿ ಹೆಸರು ಗಳಿಸಿದ ಕಲಾವಿದರನ್ನು ಬಳಸದೆ ಗಂಜಿಮಠ ಆಸುಪಾಸಿನ ಉತ್ಸಾಹಿ ತರುಣ-ತರುಣಿಯರನ್ನು ಬಳಸಿಕೊಂಡು ಚಿತ್ರ ಮೂಡಿಬರಲಿದೆ. ಈ ರೀತಿಯ ಕಲಾವಿದರು ತನ್ನ ಮನೋಜ್ಞ ಅಭಿನಯವನ್ನು ತೋರಿಸಿ ಇವರ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು. ಯಾಕೆಂದರೆ ಈ ರೀತಿ ಯುವ ಕಲಾವಿದರೇ ಅಭಿನಯಿಸಿದ ಕಿರುಚಿತ್ರಗಳು ಸಾಕಷ್ಟು ಹೆಸರು ಮಾಡಿವೆ. ಆದ್ದರಿಂದ ಚದರುಂಗವನ್ನು ನೀವೆಲ್ಲರೂ ಗೆಲ್ಲಿಸಬೇಕೆಂದು ನುಡಿದರು.1

 

3

4

5

6

7

8

9

10

11

12

13

14

15
ಶ್ರೀ ಸಿದ್ದಿವಿನಾಯಕ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ಪ್ರಕಾಶ್ ಸುವರ್ಣ ಕಟಪಾಡಿ ನಿರ್ದೇಶನಗೈಯ್ಯಲಿದ್ದಾರೆ. ಕಥೆ-ಚಿತ್ರಕಥೆ ವಿದ್ಯಾ ಬಾಲಕೃಷ್ಣ ಅವರು ಹೆಣೆದಿದ್ದಾರೆ. ಸಂಭಾಷಣೆಯನ್ನು ಮಹಾಬಲ ಹಾಗೂ ಸುದರ್ಶನ್ ಎಂಬುವವರು ಬರೆದಿದ್ದಾರೆ. ಸಂಗೀತ ನಿರ್ದೇಶನ ಅಷ್ಟಾವಧಾನಿ ಉಮೇಶ್ ಗೌತಮ್ ನಾಯಕ್ ಕಾರ್ಕಳ, ನೃತ್ಯ ಸಂಯೋಜನೆ ದಿನೇಶ್ ಗಂಜಿಮಠ, ಹಿನ್ನೆಲೆ ಸಂಗೀತ ಸುನಾದ್ ಗೌತಮ್ ಕಾರ್ಕಳ ನಡೆಸಲಿದ್ದಾರೆ. ಛಾಯಾಗ್ರಾಹಣ ದಿನೇಶ್ ಗಂಜಿಮಠ ಪದ್ಮನಾಭ ಮಿಜಾರ್ ನಡೆಸಿದ್ದು ಮತ್ತು ಸತೀಶ್ ಪಕ್ಷಿಕೆರೆ ಸಂಕಲನಗೈಯ್ಯಲಿದ್ದಾರೆ. ಮಂಗಳೂರಿನ ಆಸುಪಾಸಿನ ಪ್ರಮುಖ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಸುನಿಲ್ ಶೆಟ್ಟಿ, ಜ್ಯೋತಿ ಗಂಜಿಮಠ ಹಾಗೂ ದೀಕ್ಷಿತ್ ಕೈಕಂಬ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಲಿದ್ದಾರೆ. ಉಮೇಶ್ ಮಿಜಾರ್ ಅವರು ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದಾರೆ.
ಗಂಜಿಮಠ ಗಣಪತಿ ದೇವಳದ ಅರ್ಚಕ ಗಣೇಶ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು, ಚಂದ್ರಹಾಸ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದರು. ಉಮೇಶ್ ಮಿಜಾರ್ ಚಿತ್ರದ ಬಗ್ಗೆ ಶುಭಕೋರಿದರು. ಹಲವಾರು ಮಂದಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *