ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಬಂಟ್ವಾಳ ತಾಲೂಕು ಇಲ್ಲಿ ನಿರ್ಮಿಸಿರುವ “ಫಲ್ಗುಣಿ” ವಸತಿ ಗೃಹ ಹಾಗೂ ನೂತನ ಶೌಚಾಲಯದ ಉದ್ಘಾಟನಾ ಸಮಾರಂಭವು ಜು.10 ರಂದು ಭಾನುವಾರ ನಡೆಯಲಿದೆ. ಸಭಾ ಕಾರ್ಯಕ್ರಮದ ಉದ್ಘಾಟನೆ ಮತ್ತು ಸಭಾಧ್ಯಕ್ಷತೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸನ್ಮಾನ್ಯ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಅಮರನಾಥ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ದ.ಕ.ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ಪಿ. ಚಂದ್ರಾವತಿ, ಬಂಟ್ವಾಳ ತಾ. ಪಂ . ಸದಸ್ಯ ಯಶವಂತ ಪೂಜಾರಿ ಪೊಳಲಿ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಅನುವಂಶಿಕ ಆರ್ಚಕ ಕಟೀಲು ಕ್ಷೇತ್ರ ಹರಿನಾರಾಯಣ ಅಸ್ರಣ್ಣ, ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ, ಸುಬ್ರಹ್ಮಣ್ಯ ತಂತ್ರಿ ಪೊಳಲಿ, ಅನಂತ ಪದ್ಮನಾಭ ಉಪಾಧ್ಯಾಯ ಕೋಡಿಮಜಲು, ಅಮ್ಮುಂಜೆ ಗ್ರಾ.ಪಂ.ಸದಸ್ಯ ಚಂದ್ರಶೇಖರ್ ಭಂಡಾರಿ, ಭಾಗವಹಿಸಲಿರುವರು. ಅನುವಂಶಿಕ ಹಾಗೂ ಆಡಳಿತ ಮೋಕೇಸರರು ಡಾ.ಮಂಜಯ್ಯ ಶೆಟ್ಟಿ, ಯು.ಟಿ.ಆಳ್ವ, ಚೇರ ಸೂರ್ಯನಾರಾಯಣ ರಾವ್, ಮಾಧವ ಭಟ್ ಪಿ., ಕಾರ್ಯನಿರ್ವಹಣಾಧಿಕಾರಿ ಹರಿಶ್ವಂದ್ರ, ಉಪಸ್ಥಿತರಿರುವರು.
