ಅಮ್ಮುಂಜೆ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಂಡೆಬೆಟ್ಟು ಮುಯ್ಯದ್ದೀನ್ ಜುಮ್ಮಾಮಸೀದಿಯಿಂದ ಹಾದುಹೋಗುವ ಹೊಳೆಬದಿ ರಸ್ತೆಗೆ ಗುರುವಾರ ಅರಣ್ಯ ಸಚಿವ ರಮಾನಾಥ ರೈ ಅವರು ಶಿಲಾನ್ಯಾಸ ನೆರವೇರಿಸಿದರು.

ರಾಜ್ಯ ಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮಂಜುರಾದ 9,80 ಲಕ್ಷದ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅಮ್ಮುಂಜೆ ಗ್ರಾಮ ಪಂ. ಅಧ್ಯಕ್ಷೆ ಪ್ರೇಮಲತಾ, ತಾ.ಪಂ ಸದಸ್ಯ ಶಿವಪ್ರಶಾದ್ , ಪಂ.ಸದಸ್ಯರಾದ ಚಂದ್ರಶೇಖರ ಭಂಡಾರಿ, ರಝಾಕ್ , ಹರೀಶ್ ಸ್ಥಳೀಯರಾದ ರಂಗನಾಥ ಶೆಟ್ಟಿ, ಇಂಜಿನಿಯರ್ ಗಳಾದ ಕೃಷ್ಣ , ಖಾದರ್, ಕಾರ್ಯನಿರ್ವಾಣಾಧಿಕಾರಿ ಮಿರಾಂದ , ಗುತ್ತಿಗೆದಾರ ಅಬೂಬಕ್ಕರ್ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು .



