ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿಗಳು ಮರಣ ಹೊಂದಿದ ಸಂದರ್ಭದಲ್ಲಿ ಆ ಕುಟುಂಗಳಿಗೆ ಆರ್ಥಿಕ ನೆರವನ್ನು ನೀಡುವ ಸದುದ್ದೇಶದಿಂದ ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನನ್ನು ಸ್ಥಾಪಿಸಲಾಗಿದೆ.   ಡಿಕೆಎಂಎ ಯ ಕಛೇರಿ ಮೊದಲನೇ ಮಹಡಿ ವೆಸ್ಟ್ ಗೇಟ್ ಹೈಟ್ಸ್ ಸ್ಟ್ರರ್ರಕ್ ರೋಡ್, ಪಳ್ನೀರ್ ಮಂಗಳೂರು ನಲ್ಲಿ ಫಲಾನುಭವಿಗಳಿಗೆ ಡಿಕೆಯಂಎ ಗುರುತಿನ ಚೀಟಿ,  ಯೊನೋಪೊಯ ಹೆಲ್ತ್ ಕಾರ್ಡ್ ಮತ್ತು ಟಾಟಾ ಡೊಕೊಮೊ ಸಿಮ್ ಕಾರ್ಡ್ ನ್ನು 30 ಮಂದಿಗೆ ಸ್ಥಾಪಾಕಾಧ್ಯಕ್ಷರು ಎಸ್.ಎಮ್.ರಶೀದ್ ಹಾಜಿಯವರು ವಿತರಿಸಿದರು.

IMG-20160702-WA0082

IMG-20160702-WA0081

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರವೂಫ್ ಪುತ್ತಿಗೆ, ಕ್ರಿಯಾ ಯೋಜನೆ ಕಾರ್ಯದರ್ಶಿ ಫಾರೂಕ್, ಜಂಟಿ ನಿರ್ದೇಶಕರು ಹರ್ಷದ್, ಸದಸ್ಯರುಗಳಾದ ಮುಹಮ್ಮದ್ ಹಾರಿಸ್, ಮುಹಮ್ಮದ್ ಆಸಿಫ್, ರಿಫಾತ್ ಅಹ್ಮದ್, ಝುಬೈರ್ ಅಂಬರ್ ಮತ್ತು ಟಾಟಾ ಡೊಕೊಮೊ ದ ಮಿಸ್ಬಾಹ್ ಕಮ್ಯೂನಿಕೇಶನ್ ಮಾಲಕ ಮುಸ್ತಫ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *