ಕೈಕಂಬ:ಸಮಾಜದಲ್ಲಿ ಮಕ್ಕಳ ಹಕ್ಕುಗಳನ್ನು ಹೇಗೆ ಪಡೆಯಬಹುದೆಂಬ ದೃಷ್ಟಿಯನ್ನಿಟ್ಟುಕೊಂಡು ಹಾಡು, ನೃತ್ಯ, ನಾಟಕದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು “ತಿಳಕನ ಕನಸು” ಎಂಬ ನಾಟಕವನ್ನು ಅಭಿನಯಿಸಿದ ಮಕ್ಕಳು. ಸುಲಭ ರೀತಿಯಲ್ಲಿ ಯಾವುದೇ ವೆಚ್ಛವಿಲ್ಲದೇ ಸ್ವತಃ ತಾವೇ ತಯಾರಿಸಿದ ಉಡುಪಿನಲ್ಲಿ ಹಾಡಿನ ಜೊತೆಗೆ ನೃತ್ಯವನ್ನು ಮಾಡುತ್ತಾರೆ. ತಮ್ಮ ಹಕ್ಕುಗಳ ಪ್ರಚಾರ ಮಾಡುವ, ಮಕ್ಕಳ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸುವ ಮಕ್ಕಳು, ಎಳೆಯ ಪ್ರಾಯದಲ್ಲಿ ಮಕ್ಕಳನ್ನು ದುಡಿಸಿ ದಂಡಿಸಿದವರ ವಿರುದ್ದ ಸಿಟಿದೆದ್ದ ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಘೊಷನೆ ಹಾಕಿದರು.

ಅಂದ ಹಾಗೇ ಇದು ನಡೆದ್ದು ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರದ ವತಿಯಿಂದ ನಡೆದ ಅಮ್ಮುಂಜೆ ಶಾಲಾ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಹಕ್ಕುಗಳ ಸಂಘದ ವಿದ್ಯಾರ್ಥಿಗಳಿಂದ ಬುಧವಾರ ನಡೆದ ನಾಟಕದಲ್ಲಿ ಕಂಡು ಬಂದ ದೃಷ್ಯ

7
11

2

3

4

5

 

8

10
ದ.ಕ ಜಿಲ್ಲೆಯ ಆಯ್ದ 10 ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಸಂಘವನ್ನು ಸ್ಥಾಪಿಸಿ ಆ ಸಂಘದ ಸದಸ್ಯರಿಂದ ತಮ್ಮ ಹಕ್ಕುಗಳನ್ನು ತೋರಿಸುವ, ನೆನಪಿಸುವಂತಹ ಅಂಶಗಳುಳ್ಳ ಸಾಂಸ್ಕೃತಿಕ ತರಬೇತಿಯನ್ನು ನೀಡಿ ಮಕ್ಕಳನ್ನು ವೇದಿಕೆಗೆ ಸಜ್ಜುಗೊಳಿಸುವ ಪತ್ರಕರ್ತ, ರಂಗನಿರ್ದೇಶಕ ಮೌನೇಶ್ ವಿಶ್ವಕರ್ಮ ಹಾಗೂ ಹಿರಿಯ ರಂಗನಟ ದಿನೇಶ್ ಅತ್ತಾವರ ತರಬೇತಿಯನ್ನು ನೀಡಿ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ.

ಆಯ್ಕೆ ಪ್ರಕ್ರಿಯೆ : ಮಕ್ಕಳ ಹಕ್ಕುಗಳ ಪ್ರಚಾರವನ್ನು ಮಾಡುವ ನಿಟ್ಟಿನಲ್ಲಿ ಶಾಲೆಗಳ 5,6,7,ನೇ ತರಗತಿ 30 ವಿದ್ಯಾರ್ಥಿಗಳ ಮಕ್ಕಳ ಹಕ್ಕುಗಳ ಸಂಘ ರಚಿಸಿ, ಈ ಪೈಕಿ 15 ಮಂದಿಯನ್ನು ಸಾಂಸ್ಕೃತಿಕ ತಂಡಕ್ಕೆ ಆಯ್ಕೆ ಮಾಡಲಾಗುವುದು. ಮೂರು ದಿನಗಳ ಕಾಲ ನಡೆಯುವ ತರಬೇತಿಯಲ್ಲಿ ಮಕ್ಕಳಿಗೆ ತಮ್ಮ ಹಕ್ಕನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕೆಂಬುವುದನ್ನು ನಾಟಕ, ನೃತ್ಯ, ಹಾಗೂ ಹಾಡಿನ ಮೂಲಕ ಹೇಳಿಕೊಡಲಾಗುತ್ತದೆ. ಇದು ಕೇವಲ ಮಕ್ಕಳಿಗೆ ಅವರ ಹಕ್ಕಿನ ಜೊತೆಗೆ ಅವರ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಮಾಡಿದಂತಾಗುತ್ತದೆ ಎನ್ನುವುದು ತರಬೇತುದಾರ ಮೌನೇಶ್ ಅವರ ಅಭಿಪ್ರಾಯ.

ಪ್ರತಿ ವರ್ಷ ಮಕ್ಕಳ ಹಕ್ಕುಗಳ ಸಂಘದಲ್ಲಿ 15 ಮಕ್ಕಳಲ್ಲಿ ಒಬ್ಬರನ್ನು ಅಧ್ಯಕ್ಷ ಹಾಗೂ ಕಾಯದರ್ಶಿಯಾಗಿ ಆಯ್ಕೆಯನ್ನು ಮಾಡಲಾಗುತ್ತದೆ. ಅವರಿಗೆ ಪ್ರಜ್ಞಾ ಸಲಹಾ ಕೇಂದ್ರದ ವತಿಯಿಂದ ಮೂರು ತಿಂಗಳಿಗೊಮ್ಮೆ ಸಭೆಯನ್ನು ನಡೆಸಲಾಗುತ್ತದೆ. ಸಂಘದ ಸದಸ್ಯರಿಗೆ ವಿಶೇಷ ಸಾಂಸ್ಕೃತಿಕ ತರಬೇತಿ ನೀಡುವುದರ ಜತೆಗೆ ಮಕ್ಕಳ ಹಕ್ಕುಗಳ ಪ್ರಚಾರ, ಮಕ್ಕಳ ಹಕ್ಕುಗಳ ಕುರಿತಾದ ನಾಟಕ, ನೃತ್ಯದ ತರಭೇತಿಯನ್ನು ನೀಡಿ ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಿಗೆ ಹಾಗೂ ದೊಡ್ಡವರಿಗೆ ತಿಳಿಹೇಳುವ ಪ್ರಯತ್ನವನ್ನು ಮಾಡುವುದು ತರಬೇತಿಯ ಉದ್ದೇಶ.

ವಿಶ್ವ ಮಕ್ಕಳ ಸಂಸ್ಥೆಯ ಒಡಂಬಡಿಕೆಯ ಪ್ರಕಾರ ಮಕ್ಕಳ ಹಕ್ಕಿನ ಬಗ್ಗೆ ವ್ಯಾಪಕ ಪ್ರಚಾರ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಪ್ರತಿಯೊಂದು ಶಾಲೆಯಲ್ಲಿ ನಡೆಸುವ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುವುದು . ಶಾಲೆಯ ಮಕ್ಕಳು ಅತ್ಯಂತ ಕುತೂಹಲದ ಜೊತೆಗೆ ಬಹಳ ಆಸಕ್ತಿಯಿಂದ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದು ಪ್ರಜ್ಞಾ ಸಲಹಾ ಕೇಂದ್ರ ಹಾಗೂ ತರಬೇತುದಾರರ ಕಾರ್ಯ ಶ್ಲಾಘನೀಯ ಎಂಬುದು ಶಾಲಾ ಮುಖ್ಯ ಶಿಕ್ಷಕ ರಘುನಾಥ ರೈ ಅವರ ಅಭಿಪ್ರಾಯ.

ಶಾಲೆಗಳಲ್ಲಿ ರಚನೆಯಾದ ಮಕ್ಕಳ ಹಕ್ಕುಗಳ ಸಾಂಸ್ಕೃತಿಕ ತಂಡದಿಂದ ಮಕ್ಕಳ ಗ್ರಾಮಸಭೆ, ಪ್ರತಿಭಾಕಾರಂಜಿ, ಸಮುದಾಯದತ್ತ ಶಾಲೆ, ಮಕ್ಕಳ ದಿನಾಚರಣೆ, ಸಾರ್ವಜನಿಕ ಸಮಾರಂಭದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮಗಳಲ್ಲಿ ಮಕ್ಕಳ ಜಾಗೃತಿಯನ್ನು ಮೂಡಿಸುವ ನೃತ್ಯವನ್ನು ಪ್ರದರ್ಶಿಸುವ ಮೂಲಕ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಯನ್ನು ಕಡಿಮೆಗೊಳಿಸುವ ಪ್ರಯತ್ನ ನಡೆಸಲಾಗುವುದು.

ಮಕ್ಕಳಲ್ಲಿ ತಮ್ಮ ಹಕ್ಕುಗಳ ಜಾಗೃತಿ ಅಗತ್ಯ. ಈ ನಿಟ್ಟಿನಲ್ಲಿ ಪ್ರಜ್ಞಾ ಸಲಹಾ ಕೇಂದ್ರ ಕಳೆದ 5 ವರ್ಷಗಳಿಂದ 10 ಶಾಲೆಗಳಲ್ಲಿ ತರಬೇತಿಯನ್ನು ನಡೆಸುತ್ತಿದೆ. ಇದರಿಂದ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯದ ಜೊತೆಗೆ ತಮ್ಮ ಹಕ್ಕಿನ ಅರಿವು ಮೂಡಿಸಲು ಸಾಧ್ಯ ಎಂದು ಕೆ.ಕೆ.ಎಸ್ ಯೋಜನಾಧಿಕಾರಿ ವಿಲಿಯಂ ಸ್ಯಾಮುವೆಲ್ ಹೇಳುತ್ತಾರೆ.

ಅಲ್ಲದೇ ದಿನೇಶ್ ಅತ್ತಾವರ ಅವರು ಅಜ್ಜಿ ಪಾತ್ರದಲ್ಲಿ ನಟಿಸಿ ಎಲ್ಲರನ್ನು ನಕ್ಕು ನಗಿಸಿ ಶಾಲಾ ವಿದ್ಯಾರ್ಥಿಗಳು ಶಿಕ್ಷಕರಿಗೆ ಹಾಗೂ ತಂದೆತಾಯಿಗೆ ಗೌರವದಿಂದ ನಡೆಯಬೇಕೇಂದು ಮಕ್ಕಳಿಗೆ ತಿಳಿಹೇಳಿದರು.

ಮಂಗಳೂರು ಪ್ರಜ್ಞಾ ಸಲಹಾ ಕೇಂದ್ರದ ಒಟ್ಟು ಮೂರು ವಲಯಗಳಲ್ಲಿ ನೀರುಮಾರ್ಗ, ಕೈಕಂಬ, ತೊಕ್ಕೊಟು ಇಲ್ಲಿಯ ಆಯ್ದ ಶಾಲೆಗಳು ಸೇರಿವೆ. ಬಂಟ್ವಾಳ ತಾಲೂಕಿನ ಪೊಳಲಿ ವಿದ್ಯಾವಿಲಾಸ ಅನುದಾನಿತ ಹಿ.ಪ್ರಾ.ಶಾಲೆ. ಬೆಂಜನಪದವು ದ.ಕ.ಜಿ.ಹಿ.ಪ್ರಾ.ಶಾಲೆ ಹಾಗೂ ಅಮ್ಮುಂಜೆ ಅನುದಾನಿತ ಹಿ.ಪ್ರಾ.ಶಾಲೆಯ ವಿದ್ಯಾಥಿಗಳ ಮಕ್ಕಳ ಸಂಘವನ್ನು ರಚಿಸಿ ತರಭೇತಿ ನೀಡಲಾಯಿತು. ಇದಲ್ಲದೆ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು. ಶಾಲಾ ಶಿಕ್ಷಕ ಶಿಕ್ಷಕಿಯರು ಕಾರಯಕ್ರಮದಲ್ಲಿ ಭಾಗವಹಿಸಿ ಸಂತೋಷ ವ್ಯಕ್ತಪಡಿಸಿದರು.

ಪ್ರಜ್ಞಾ ಸಲಹಾ ಕೇಂದ್ರದ ಕೆ.ಕೆ.ಎಸ್ ಯೋಜನಾಧಿಕಾರಿ ವಿಲಿಯಂ ಸ್ಯಾಮುವೆಲ್ ಅವರ ಮಾರ್ಗದರ್ಶನದಲ್ಲಿ ಅಮ್ಮುಂಜೆ ಶಾಲೆಯಲ್ಲಿ ನಡೆದ ಮಕ್ಕಳ ಹಕ್ಕುಗಳ ಕಾರ್ಯಕ್ರಮದಲ್ಲಿ ವಲಯ ಸಂಯೋಜಕರಾದ ಅಶೋಕ್, ಚಂದ್ರಶೇಖರ , ಸಂಪನ್ಮೂಲ ವಯಕ್ತಿಗಳಾಗಿ ಮೌನೇಶ್ ವಿಶ್ವಕರ್ಮ, ದಿನೇಶ್ ಅತ್ತಾವರ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *