ಕಟೀಲು:ಯೋಗ ದಿನಾಚರಣೆಯ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಜೂ.21ರಂದು ಮಂಗಳವಾರ ನಡೆಯಿತು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕಟೀಲು ಶಾಖೆಯ ಪ್ರಬಂಧಕರಾಗಿರುವ ಜಿ.ವಿ. ಭಟ್ ಅವರು ಯೋಗವು ರೋಗ ನಿವಾರಕವಿ ಅಂದರೆ ಯೋಗದಿಂದ ರೋಗ ನಿವಾರಣೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು.yoga-photos

ಸಂಸ್ಥೆಯ ಪ್ರಾಚಾರ್ಯರಾದ ಜಯರಾಮ ಪೂಂಜರವರು ಎಲ್ಲರನ್ನೂ ಸ್ವಾಗತಿಸಿ ಯೋಗಾಭ್ಯಾಸದ ಮಹತ್ವವನ್ನು ತಿಳಿಸಿ, ಎಲ್ಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು. ಅಷ್ಟಾಂಗ ಯೋಗದ ಬಗ್ಗೆ ಸಂಸ್ಕೃತ ಉಪನ್ಯಾಸಕರಾದ ಶಂಕರ ಮರಾಠೆಯವರು ಉಪನ್ಯಾಸ ನೀಡಿದರು. ಹಿಂದಿ ಉಪನ್ಯಾಸಕ ಡಾ| ಕೇಶವ ಹೆಗ್ಡೆಯವರು ಯೋಗದ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು. ಇಲೆಕ್ಟ್ರಾನಿಕ್ಸ್ ಉಪನ್ಯಾಸಕಿ ಕವಿತಾ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *