ಕಿನ್ನಿಗೋಳಿ;ಇಂದು ಸುರಿದ ಬಾರೀ ಮಳೆಯ ಕಾರಣ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಗುಡ್ಡ ಕುಸಿದು ಪ್ರಯಾಣಿಕ ಗಾಯಗೊಂಡ ಘಟನೆ ಕಿನ್ನಿಗೋಳಿ ಸಮೀಪದ ಮುಂಚಿಗುಡ್ಡೆಯಲ್ಲಿ ಮಂಗಳವಾರ ನಡೆದಿದೆ
ಗಾಯಗೊಂಡವರನ್ನು ಕುರುಂಬಿಲ್ ಗುತ್ತು ನಿವಾಸಿ ದೊಡ್ಡಣ್ಣ ಎಂದು ಗುರುತಿಸಲಾಗಿದೆ. ಕಿನ್ನಿಗೋಳಿ ಮೂರುಕಾವೇರಿಯಿಂದ ಮುಂಚಿಗುಡ್ಡೆ ಕಡೆಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು ಪ್ರಯಾಣಿಕ ಗಾಯಗೊಂಡಿದ್ದು ಸ್ಥಳೀಯ ಅಸ್ಪತ್ರೆಗೆ ದಾಖಲಿಸಲಾಗಿದೆ, ರಿಕ್ಷಾ ಚಾಲಕ ಜೋಯ್ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ, ರಿಕ್ಷಾ ಬಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಸದಸ್ಯ ಕಿರಣ್ ಐಕಳ ಮತ್ತಿತರರು ಬೇಟಿ ನೀಡಿ ಪರಿಶೀಲಿಸಿದ್ದಾರೆ.

