ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ 2016-17ನೇ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮವು ದಿನಾಂಕ 17.06.2016 ರಂದು ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.
ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಮಾತಾಜಿಯವರು ಆರತಿ ಮಾಡಿ ತಿಲಕ ಇಟ್ಟು ಆಶೀರ್ವದಿಸಿದರು. ವಿದ್ಯಾರ್ಥಿಗಳು ಅಗ್ನಿಗೆ ಘೃತಾಹುತಿ ನೀಡುವ ಮೂಲಕ ತಮ್ಮ ವಿದ್ಯಾಭ್ಯಾಸವು ಸಾಂಗವಾಗಿ ಸಾಗಲು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಸಂಚಾಲಕರಾದ ಶ್ರೀ ಪ್ರಭಾಕರ ಭಟ್ ಕಲ್ಲಡ್ಕ ಇವರು ವಿದ್ಯೆಯ ಜೊತೆಗೆ ಸಂಸ್ಕಾರವನ್ನು ನೀಡುವುದು ಶಾಲೆಯ ಕರ್ತವ್ಯ. ಯಾವ ಕ್ಷೇತ್ರದಲ್ಲಿ ಮುಂದುವರಿದರೂ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸೋಣ ಎಂದು ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿಯಲ್ಲಿ ವಕೀಲರಾಗಿರುವ ಸುಬ್ರಹ್ಮಣ್ಯ ಕುಮಾರ್ ಅಗರ್ತ ಇವರು ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರೀರಾಮ ವಿದ್ಯಾಕೇಂದ್ರವು ಮರುಭೂಮಿಯಲ್ಲಿರುವ ಓಯಸಿಸ್ನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ 2015-16 ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಒಖಕಐ ನ ಜನರಲ್ ಮ್ಯಾನೇಜರ್ ಆಗಿರುವ ಶ್ರೀಪ್ರಸಾದ್.ಬಿ.ಹೆಚ್.ವಿ, ಒಖಕಐ ನ ಮ್ಯಾನೇಜಿಂಗ್ ಡೈರಕ್ಟರ್ ಹೆಚ್ ಕುಮಾರ್, ಉದ್ಯಮಿ ವಿಕ್ರಮ್.ಪೈ, ಕುಂಬ್ಳೆ ಪಂಚಾಯತ್ ಅಧ್ಯಕ್ಷ ಶಂಕರ್ ಆಳ್ವ, ಆರ್.ಎಸ್.ಎಸ್ ನ ಕಾರ್ಯಕರ್ತರಾದ ದಯಾನಂದ ರಾವ್ ಹಾಗೂ ರವೀಂದ್ರನ್, ಶ್ರೀರಾಮ ವಿದ್ಯಾಕೇಂದ್ರದ ಅದ್ಯಕ್ಷರಾದ ಶ್ರೀ ನಾರಾಯಣ ಸೋಮಯಜಿ, ಮುಖ್ಯ ಕಾರ್ಯನಿರ್ವಾಹಕರಾದ ವಸಂತ ಮಾಧವ, ಕಮಲಾ ಪ್ರಭಾಕರ ಭಟ್, ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಕಣಂತೂರು, ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶಿವಗಿರಿ ಸತೀಶ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೀತಾ ಮಾತಾಜಿ ನಿರೂಪಿಸಿ, ಶಿವಗಿರಿ ಸತೀಶ್ ಭಟ್ ರವರು ಸ್ವಾಗತಿಸಿದರು.
