ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿಶ್ವಯೋಗ ದಿನಾಚರಣೆಯ ಅಂಗವಾಗಿ ಶ್ರೀರಾಮ ಪ್ರೌಢಶಾಲೆಯ 600 ವಿದ್ಯಾರ್ಥಿಗಳು ಬಾಳ್ತಿಲ ಗ್ರಾಮದ ಸುದೆಕಾರ್ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ನೆಟ್ಟರು. ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್, ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿಯವರ ಮಾರ್ಗದರ್ಶನದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಅಡಿಕೆಕೃಷಿಯ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯನಿರ್ವಹಣಾಧಿಕಾರಿ ವಸಂತ ಮಾಧವ, ಮುಖ್ಯ ಶಿಕ್ಷಕ ರಮೇಶ್ಎನ್. ಕಲಾ ಶಿಕ್ಷಕ ಜಿನ್ನಪ್ಪ ಏಳ್ತಿಮಾರ್ ಶಿಕ್ಷಕರಾದ ಕೊಟ್ರೇಶಪ್ಪ, ಬೀನಾ, ದಿವ್ಯ ಹಾಗೂ ರೋಹಿತಾಕ್ಷ ಬೆರ್ಕಳ, ಪಿ.ಕೆ.ಪದ್ಮನಾಭ, ಸುಬ್ರಾಯಕಾರಂತ ನಂದಾವರ, ಕಮಲಾಕ್ಷ ಶಂಭೂರು ಮೊದಲಾದವರು ಸಹಕರಿಸಿದರು.


