ಕಿನ್ನಿಗೋಳಿ: ಬಿಜೆಪಿ ಗ್ರಾಮ ಸಮಿತಿ ಕಿನ್ನಿಗೋಳಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ವಿತರಣಾ ಸಮಾರಂಭ ಪುನರೂರು ವಿಶ್ವನಾಥ ದೇವಳದ ಸಭಾಗ್ರಹದಲ್ಲಿ ನಡೆಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾದ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ, ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ಭುವನಾಬಿರಾಮ ಉಡುಪ, ಕಿನ್ನಿಗೋಳಿ ಪಂಚಾಯತ್ ಸದಸ್ಯರಾದ ದೇವಪ್ರಸಾದ್ ಪುನರೂರು,ರವೀಂದ್ರ, ಸುಲೋಚನ, ಶಾಲಿನಿ, ಕಿನ್ನಿಗೋಳಿ ಗ್ರಾಮ ಸಮಿತಿ ಸದಸ್ಯ ಸಂತೋಷ್ ಶೆಟ್ಟಿ, ಬಿಜೆಪಿ ಮುಖಂಡರಾದ ಅಜಿತ್, ಹೇಮಲತಾ ರಘರಾಮ, ರತ್ನಾಕರ ಸುವರ್ಣ, ಸಚಿನ್ ಮತ್ತಿತರರು ಇದ್ದರು.

