ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿ ಪಲ್ಗುಣಿ ನದಿಯಿಂದ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಹಾಗೂ ಲಾರಿ ಚಾಲಕ ಅಶ್ರಫ್ ನನ್ನು ಸೋಮವಾರ ವಶಪಡಿಸಿ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಯಿತು.
ಜಿಲ್ಲಾಧಿಕಾರಿಗಳ ಆದೇಶದಂತೆ ಪಿಡಬ್ಲ್ಯೋ ಇಂಜಿನಿಯರ್ ಅರುಣ್ ಪ್ರಕಾಶ್ ನೇತೃತ್ವದಲ್ಲಿ ಕರಿಯಂಗಳ ಗ್ರಾಮದ ಪೊಳಲಿ ಪುಂಚಮೆ ಎಂಬಲ್ಲಿ ಸುಮಾರು 20 ಲಾರಿಗಳನ್ನು ತಪಾಸಣೆ ನಡೆಸಲಾಯಿತು. ಓವರ್ ಲೋಡು ತುಂಬಿಸಿಕೊಂಡು ದೂರದ ಊರಿಗೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬಂಟ್ವಾಳ ತಾಹಸಿಲ್ದಾರ್ಗೆ ಹಸ್ತಾಂತರಿಸಲಾಯಿತು. ಕಾರ್ಯಚರಣೆಯಲ್ಲಿ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಅಮ್ಮುಂಜೆ ಪಂಚಾಯತ್ನ ಪಿಡಿಓ ನವೀನ್ ಭಂಡಾರಿ ಬಂಟ್ವಾಳ ಗ್ರಾಮಾಂತರ ಠಾಣೆಯ ಎ ಎಸ್ ಐ ರುಕ್ಮಯ ಗೌಡ ಪಾಲ್ಗೊಂಡಿದ್ದರು.


