ಬಂಟ್ವಾಳ: ಏರ್ಟೆಲ್ ದೂರಸಂಪರ್ಕ ಸಂಸ್ಥೆಯ 4ಜಿ ನೆಟ್ವರ್ಕ್ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಚಾಲನೆಗೊಳಿಸುವ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಏರ್ಟೆಲ್ನ ಪ್ರಾಂತೀಯ ವ್ಯವಹಾರ ವ್ಯವಸ್ಥಾಪಕ ಅಜಯ್ ಕುಮಾರ್ ಏರ್ಟೆಲ್ 4ಜಿ ಲೋಗೋ ಅನಾವರಣಗೊಳಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಪ್ರಾಂತೀಯ ಮಾರಾಟ ವ್ಯವಸ್ಥಾಪಕ ದೀಪಕ್ ಪೆಮ್ಮಯ್ಯ ನೂತನ ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮಾರ್ಕೆಟಿಂಗ್ ಮುಖ್ಯಸ್ಥ ರಾಹುಲ್ ಶಾ, ನೆಟ್ವಕರ್್ ಮುಖ್ಯಸ್ಥ ವಿಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿತರಕರಾದ ಗಂಗಾಧರ ಶೆಟ್ಟಿ, ಹರ್ಷರಾಜ್, ಪ್ರಮುಖರಾದ ಇಮ್ರಾನ್ ಹುಸೈನ್ ಹಾಜರಿದ್ದರು. ಪ್ರಜ್ವಲ್ ಚಿತ್ರಾಪು ಕಾರ್ಯಕ್ರಮ ನಿರೂಪಿಸಿದರು.
