ಬಂಟ್ವಾಳ: ಮೌಲ್ಯಾಧಾರಿತ ಶಿಕ್ಷಣ ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಸಾಧ್ಯ. ಆ ದೃಷ್ಟಿಯಿಂದ ಕನ್ನಡ ಶಾಲೆಗಳನ್ನು ಉಳಿಸಿ ಪ್ರೇರಣೆಯಾಗುವ ಕಾರ್ಯಕ್ರಮಗಳನ್ನು ಸಂಘಟನೆಗಳ ಮೂಲಕ ಆಯೋಜಿಸಿ ಎಂದು ಮಂಗಳೂರು ವಿಶ್ವ ಹಿಂದೂ ಪರಿಷತ್ ಕಾರ್ಯಧ್ಯಕ್ಷ ಜಿತೇಂದ್ರ ಎಸ್. ಕೊಟ್ಟಾರಿ ಹೇಳಿದರು. ಅವರು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದ ವತಿಯಿಂದ ಜಿ.ಪಂ. ಸ.ಹಿ.ಪ್ರಾ. ಶಾಲೆ ಪಾಣೆಮಂಗಳೂರಿನ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಎಸ್.ವಿ.ಎಸ್.ಅನುದಾನಿತ ಹಿ.ಪ್ರಾ.ಶಾಲೆ ಪಾಣೆಮಂಗಳೂರು ಇಲ್ಲಿನ ವಿದ್ಯಾರ್ಥಗಳಿಗೆ ಊಟದ ತಟ್ಟೆ ವಿತರಿಸಿ ಮಾತನಾಡಿದರು. ಮೂಲ ಭಾಷೆಯನ್ನು ಮರೆತರೆ ನಮ್ಮ ಮೂಲವನ್ನು ಮರೆತಂತೆ, ವಿದೇಶಿ ಸಂಸ್ಕೃತಿಯ ಇಂಗ್ಲೀಷ್ ವ್ಯಾಮೋಹವನ್ನು ಬಿಟ್ಟು, ಕನ್ನಡ ಮತ್ತು ಕನ್ನಡ ಶಾಲೆಯನ್ನು ಉಳಿಸುವಂತಹ ಕೆಲಸ ಜವಬ್ದಾರಿಯುತ ಸಂಘಟನೆಗಳಿಂದ ಆಗಬೇಕಾಗಿದೆ ಎಂದರು.

ವೇದಿಕೆಯಲ್ಲಿ ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ರಾಮ್ದಾಸ್ ಬಂಟ್ವಾಳ, ನರಿಕೊಂಬು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರಕಾಶ್ ಕೋಡಿಮಜಲು, ಎಸ್.ವಿ.ಎಸ್.ಅನುದಾನಿತ ಹಿ.ಪ್ರಾ.ಶಾಲೆ ಪಾಣೆಮಂಗಳೂರು ಇದರ ಸಂಚಾಲಕ ವೆಂಕಟರಾಯ ಶೆಣೈ, ಜಿ.ಪಂ. ಸ.ಹಿ.ಪ್ರಾ. ಶಾಲೆ ಪಾಣೆಮಂಗಳೂರಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಕೀಂ, ಪ್ರಮುಖರಾದ ಪುರುಷೋತ್ತಮ ಟೈಲರ್, ಭಾಸ್ಕರ್ ದೇವಾಡಿಗ, ಗುರುರಾಜ್ ಬಂಟ್ವಾಳ, ಪ್ರದೀಪ್ ಅಜ್ಜಿಬೆಟ್ಟು, ಸಂದೀಪ್ ಕುಲಾಲ್, ಜಿ.ಪಂ. ಸ.ಹಿ.ಪ್ರಾ. ಶಾಲೆ ಪಾಣೆಮಂಗಳೂರಿನ ಮುಖ್ಯ ಶಿಕ್ಷಕಿ ಶಾಲಿನಿ, ಎಸ್.ವಿ.ಎಸ್.ಅನುದಾನಿತ ಹಿ.ಪ್ರಾ.ಶಾಲೆ ಪಾಣೆಮಂಗಳೂರಿನ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು
