ಬಂಟ್ವಾಳ: ಪಿಲಿಮೊಗರು ಗ್ರಾಮದ ಯುವತಿಯೋರ್ವಳು ಜ್ವರಕ್ಕೆ ಬಲಿಯಾಗಿದ್ದಾಳೆ. ಕಾರ್ಕಳ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿನಿ ವಿನುತ(17) ಮೃತ ದುರ್ದೈವಿ. ಮೂಲತಃ ಪಿಲಿಮೊಗರು ನಿವಾಸಿಯಾಗಿರುವ ಈಕೆ ಕಳೆದ ಹಲವು ವರ್ಷಗಳಿಂದ ಕಾರ್ಕಳ ಸಮೀಪದತನ್ನ ಅಜ್ಜಿಯ ಮನೆಯಲ್ಲಿ ವಾಸ್ತವ್ಯವಿರುತ್ತಿದ್ದಳು. ಕಳೆದ ಕೆಲವು ದಿನಗಳ ಹಿಂದೆ ಆಕೆಗೆ ಜ್ವರಕಾಣಿಸಿಕೊಂಡಿತ್ತು. ಮನೆಮಂದಿ ಆಕೆಗೆ ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಮೃತ ಶರೀರವನ್ನು ಶುಕ್ರವಾರ ಪಿಲಿಮೊಗರು ಗ್ರಾಮದ ಮನೆಗೆ ಕರೆತರಲಾಗಿದೆ.

By suddi9

Leave a Reply

Your email address will not be published. Required fields are marked *