ದೇವರು ಸರ್ವಶಕ್ತ. ಹೊಸ ಹೆಜ್ಜೆ ಇಡುವ ಮುನ್ನ ತಾಯಿ ಭಾರತಿಯನ್ನು ಆರಾಧಿಸಬೇಕು, ಹಿರಿಯರನ್ನು ಗೌರವಿಸಬೇಕು. ಇದರಿಂದ ಮುಂದಿನ ಕಾಯಕ ಯಶಸ್ವಿಯಾಗುವುದು ಎಂದು ಶ್ರೀರಾಮ ವಿದ್ಯಾಕೇಂದ್ರ ಮುಖ್ಯಕಾರ್ಯನಿರ್ವಾಹಕರು ಶ್ರೀ ವಸಂತಮಾಧವ ಶ್ರೀಮಾನ್ ತಿಳಿಸಿದರು.

ಅವರು ಶ್ರೀರಾಮ ಪ್ರೌಢಶಾಲಾ ವಿಭಾಗದಲ್ಲಿ ನಡೆದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಜಯಾನಂದ ಪೆರಾಜೆ ಶ್ರೀಮಾನ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಸಂಸ್ಕøತಿ, ಸಂಸ್ಕಾರ, ಗುಣ, ನಡತೆ ಬೆಳೆಸಿಕೊಳ್ಳಬೇಕು. ಏಕಾಗ್ರತೆಯಿಂದ ಅಭ್ಯಾಸ ನಡೆಸಿದರೆ ಯಶಸ್ಸು ಸಾಧ್ಯ ಎಂದರು.

DSCN0052
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆಗೈದು ಹಿರಿಯರಿಂದ ತಿಲಕಧಾರಣೆ ಪಡೆದು ಹಿರಿಯರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರೌಢ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಶ್ರೀಮಾನ್, ಹಿರಿಯ ಶಿಕ್ಷಕಿಯರಾದ ಶ್ರೀಮತಿ ವಸಂತಿ ಮಾತಾಜಿ, ಶ್ರೀಮತಿ ಶಾಂಭವಿ ಮಾತಾಜಿ ಉಪಸ್ಥಿತರಿದ್ದರು.
ರಂಜನ್ 10 ಸ್ವಾಗತಿಸಿ, ಶ್ರೀಕಲಾ 10 ನಿರೂಪಿಸಿ, ಸ್ಫೂರ್ತಿ 10 ವಂದಿಸಿದರು.

By suddi9

Leave a Reply

Your email address will not be published. Required fields are marked *