ಸುದ್ದಿ9 ಕಿನ್ನಿಗೋಳಿ:  ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಹಾಯಹಸ್ತ ನೀಡಿ ಸೇವಾ ಸೌಹಾರ್ದದ ಮನೋಭಾವ ಬೆಳೆಸಿ ಸಭ್ಯ ಸಮಾಜದ ನಿರ್ಮಾಣ ಮಾಡಲು ರೋಟರಿ ಮಿತ್ರರು ಸಹಕರಿಸಬೇಕು ಎಂದು ರೋಟರಿ ಜಿಲ್ಲೆ 3180 ವಲಯ 4ರ ಸಹಾಯಕ ಗವರ್ನರ್ ಡಾ| ಅರವಿಂದ ಭಟ್ ಹೇಳಿದರು.

4KinniRotary
ಮಂಗಳವಾರ ಕಿನ್ನಿಗೋಳಿ ಸಹಕಾರಸೌಧ ಸಭಾಭವನದಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್ ಆಯೋಜಿಸಿದ ರೋಟರಿ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೊ ಅಧ್ಯಕ್ಷತೆ ವಹಿಸಿದ್ದರು, ರೋಟರಿ ಜಿಲ್ಲೆ 3180 ವಲಯ 3ರ ನಿಯೋಜಿತ ಸಹಾಯಕ ಗವರ್ನರ್ ನಾಗೇಂದ್ರ ರೋಟರಿಯ ಧ್ಯೇಯ ಉದ್ದೇಶಗಳ ಬಗ್ಗೆ ಪೂರಕ ಮಾಹಿತಿ ನೀಡಿದರು.
ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ಜೊಕಿಂ ಸಿಕ್ವೇರಾ, ನಿಯೋಜಿತ ಅಧ್ಯಕ್ಷ ವಿಲಿಯಂ ಸಿಕ್ವೇರಾ ಉಪಸ್ಥಿತರಿದ್ದರು.
ರೋಟರಿ ವಲಯ 3 ರ ನಿಯೋಜಿತ ವಲಯ ಸೇನಾನಿ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *