• ಕಾಠ್ಮಂಡು: ಭಾರತೀಯ ಯಾತ್ರಿಕರನ್ನು ಒಯ್ಯುತ್ತಿದ್ದ ಬಸ್ಸು ನೇಪಾಲದಲ್ಲಿ ರಸ್ತೆಯಿಂದ ಉರುಳಿ ನದಿಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟು ಇತರ 58 ಮಂದಿ ಗಾಯಗೊಂಡಿದ್ದಾರೆ. ನೇಪಾಲದ ಪ್ಯೂಥಾನ್‌ ಜಿಲ್ಲೆಯ ಗೋಥೀಬಾಂಗ್‌ ಎಂಬಲ್ಲಿ ಈ ನತದೃಷ್ಟ ಬಸ್ಸು ಸೋಮವಾರ ಮಡಿ ನದಿಗೆ ಉರುಳಿ ಬಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.
    • ಈ ಅವಘಡದಲ್ಲಿ ಮೃತಪಟ್ಟಿರುವ ಹೆಚ್ಚಿನವರು ಭಾರತೀಯ ಯಾತ್ರಿಕರಾಗಿದ್ದು ಇವರಲ್ಲಿ ಬಹು ಮಂದಿ ಉತ್ತರಪ್ರದೇಶದವರಾಗಿದ್ದಾರೆ ಎಂದು ಮುಖ್ಯ ಜಿಲ್ಲಾಧಿಕಾರಿ ರಾಮ್‌ ಬಹಾದೂರ್‌ ಕರುಂಬಾಂಗ್‌ ತಿಳಿಸಿದ್ದಾರೆ.

    ಬಸ್ಸು ನದಿಗೆ ಬಿದ್ದೊಡನೆಯೇ 9 ಮಂದಿ ಅಲ್ಲೇ ಮೃತಪಟ್ಟರು. ಇಬ್ಬರು ಆಸ್ಪತ್ರೆಗೆ ಒಯ್ಯಲ್ಪಡುವಾಗ ಮೃತಪಟ್ಟರು. ಐದು ಮಂದಿ ಪ್ಯೂಥಾನ್‌ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.19 ಮಂದಿ ಗಾಯಾಳುಗಳನ್ನು ಬೈರಹವಾ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದವರು ಪ್ಯೂಥಾನ್‌ನಲ್ಲಿ ಚಿಕಿತ್ಸೆ ಪಡೆದುಕೊಂಡರು.

By suddi9

Leave a Reply

Your email address will not be published. Required fields are marked *