ಕೈಕಂಬ:ಬೈಲು ಮೂಡುಕೆರೆ ಹಾಗೂ ಕೌಡುರು ಕೆರೆ ದೈವಗಳಾದ ಶ್ರೀ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ದೈವಗಳಿಗೆ ವರ್ಷಾವದಿ ನೇಮೋತ್ಸವವು ಎ.13ರಿಂದ 15ರವರೆಗೆ ನಡೆಯಲಿದೆ. 13ರಂದು ಸಂಜೆ ದೈವದ ಭಂಡಾರ ಆಗಮನ.ರಾತ್ರಿ ಶ್ರೀ ದೈವರಾಜ ಕೊರ್ದಬ್ಬು ಹಾಗೂ ತನ್ನಿಮಾನಿಗ ದೈವದ ನೇಮ. 14ರಂದು ಗುಳಿಗ ಪಂಜುರ್ಲಿ ದೈವದ ನೇಮ. 15ರಂದು ಭಂಡಾರ ನಿರ್ಗಮನವಾಗಲಿದೆ ಎಂದು ಕೊರ್ದಬ್ಬು ದೈವಸ್ಥಾನ ಮುದುಕೆರೆ ಕೌಡುರು ಇದರ ಪರಿಚಾರಕರು ಹರೀಶ್ ಕುಮಾರ್ ತಿಳಿಸಿದ್ದಾರೆ.


