ಕೈಕಂಬ:ಆಲ್ ಕಾರ್ಗೋ ಲಾಜಿಸ್ಟಿಕ್(ರಿ) ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ(ರಿ) ಪ್ರಾಥಮಿಕ ಆರೋಗ್ಯಕೇಂದ್ರ ಅಂಬ್ಲಮೊಗರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಬಿರುವ ಎಲಿಯಾರ್‍ಪದವು ಹಾಗೂ ಗ್ರಾಮಿಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನೆಪೋಯ ವೈದೈಕೀಯ ಕಾಲೇಜು ಯೇನಪೋಯ ವಿಶ್ವವಿದ್ಯಾನಿಲಯ ಹಾಗೂ ಯೆನಪೋಯ ದಂತ ವೈದ್ಯಕೀಯ ಕಾಲೇಜು ದೇರಳಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರವು ಇತ್ತೀಚೆಗೆ ನಡೆಯಿತು. ಆಲ್‍ಕಾರ್ಗೊ ಲಾಜಿಸ್ಟಕ್(ರಿ) ಸಿ.ಎಸ್.ಆರ್‍ನ ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು.

3

4

6

9vp thapasana sibiraಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್‍ರವರು ಸಲಹಾ ಕೇಂದ್ರದ ವತಿಯಿಂದ ಕೈಗೊಂಡಿರುವ ಸಮಾಜ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಯೆನೆಪೋಯ ಆಸ್ಪತ್ರೆಯ ತಜ್ಞ ವೈದ್ಯ ಡಾ.ಪೂನಮ್ ನಾಯಕ್ ಹಾಗೂ ಡಾ.ಮುಬೀನಾರವರು ಶಿಬಿರದ ಸವಲತ್ತುಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಅಂಬ್ಲಮೊಗರು ಪ್ರಾಥಮಿಕ ಕೇಂದ್ರದ ವೈದ್ಯಧಿಕಾರಿ ಡಾ. ಸುದೇಶ್ ದೇರೆಬೈಲ್, ಶಾಲಾ ಮುಖ್ಯೋಪಾದ್ಯಾಯಿನಿ ಜೆಸಿಂತಾ, ಪ್ರಸಿದ್ದ ವೈದ್ಯೆ ಡಾ. ರೇಖಾ ಪಿ.ಶೆಣೈ, ಡಾ.ಅರೀಫ್, ಡಾ.ಫರೀದ್ ಉಳ್ಳಾಲ್‍ರವರು ಉಪಸ್ಥಿತರಿದ್ದರು. ಸುಮಾರು 155 ಮಂದಿ ಶಿಬಿರಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ತೊಕ್ಕೊಟ್ಟು ವಲಯ ಸಂಯೋಜಕ ಪ್ರದೀಪ್ ಕಾಮತ್ ಸ್ವಾಗತಿಸಿದರು. ಸಂಪನ್ಮೊಲ ಅಧಿಕಾರಿ ಸುನೀತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

 

By Suddi9

Leave a Reply

Your email address will not be published. Required fields are marked *