ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಎ.5 ರಂದು ಮಂಗಳವಾರ ಆರಂಭಗೊಂಡಿತು. ಶ್ರೀ ದೇವಳದಲ್ಲಿ ತಂತ್ರಿಗಳು ,ಅರ್ಚಕರು, ಆಡಳಿತ ಮಂಡಳಿಯ ಮೋಕ್ತೇಸರರು ಹಾಗೂ ದೇವಳದ ಪ್ರಮುಖರಾದ ಪರ್ದಕಂಡ ವಾಸುದೇವ ಭಟ್ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮುಂಜೆ ,ಮಳಲಿ ,ಉಳಿಪಾಡಿ, ಮೊಗರು ಗಣ್ಯರಾದಿಗಳು ಬ್ರಹದಾಕಾರದ ಚೆಂಡನ್ನು ಕೊಂಬು ಕಹಳೆ ಬ್ಯಾಂಡ್ ವಾಲಗದೊಂದಿಗೆ ಪವಿತ್ರವಾದ ಚೆಂಡಿನ ಗದ್ದೆಗೆ ದೇವಳದಿಂದ ತರಲಾಯಿತು. ಪ್ರಮುಖರಾದ ಪರ್ದಕಂಡ ವಾಸುದೇವ ಭಟ್ ಅವರು ಚೆಂಡಾಟಕ್ಕೆ ಚಾಲನೆ ನೀಡಿದರು. ಅಮ್ಮುಂಜೆ ಕಡೆಯಿಂದ ಮಳಲಿ ಕಡೆಗೆ ಮಳಲಿಯಿಂದ ಅಮ್ಮುಂಜೆ ಕಡೆಗೆ ಚೆಂಡನ್ನು ಕುಟ್ಟುತ್ತಾರೆ ಇವರಿಗೆ ಬೆಳ್ಳೂರು ಮಲ್ಲೂರಿನವರು ಸಾಥ್ ನೀಡುತ್ತಾರೆ.
ಚೆಂಡು ಗದ್ದೆಯ ಒಂದು ಬದಿಗೆ ಮುಟ್ಟಿಸಿ ಚೆಂಡು ಹಾರಿಸಿದವರಿಗೆ ಎತ್ತಿಕೊಂಡು ಬಂದು ಕೊಟ್ಟರೆ ಗೆಲುವು ಅವರಿಗಾಗುತ್ತದೆ. ಹೀಗೆ ದಿನಕ್ಕೆ ಮೂರು ಬಾರಿ ಚೆಂಡಾಟ ನಡೆಯುವುದು. ನಂತರ ಚೆಂಡನ್ನು ಶ್ರೀ ದೇವಳಕ್ಕೆ ತಂದು ದೇವಳದ ಮೂಂಬಾಗದಲ್ಲಿ ಅಧಿಕಾರಿ ವರ್ಗದವರಿಗೆ ಕೊಂಬು ವಾಲಗದವರಿಗೆ ಜೀಟಿಗೆಯವರಿಗೆ ಗುತ್ತಿನವರಿಗೆ ಗಂದ ಪ್ರಸಾದ ನೀಡುವರು. ನಂತರ ದೇವಳದಲ್ಲಿ ಶ್ರೀ ದೇವಿಗೆ ಪೂಜೆ ನಡೆದು ದೇವಸ್ಥನಕ್ಕೆ ಬ್ರಹದಾಕಾರದ ಬ್ಯಾಂಡ್ ಭಾರಿಸುತ್ತಾ ಚೆಂಡಿ ನೊಂದಿಗೆ ಒಂದು ಸುತ್ತು ಮೆರವಣಿಗೆಯಲ್ಲಿ ಬಂದಲ್ಲಿ ಅಂದಿನ ಉತ್ಸವ ಮುಕ್ತಾಯವಾಗುವುದು. ಇದಕ್ಕೆ ಜೀಟಿಗೆ ಸಲಾಂ ಎಂದು ಕರೆಯುತ್ತಾರೆ. ಈಗೇ ಪೊಳಲಿಯಲ್ಲಿ ಐದು ದಿನಗಳ ಚೆಂಡಿನ ಉತ್ಸವ ನಡೆಯುತ್ತದೆ. ಎ.9ರಂದು ಕಡೆ ಚೆಂಡು ನಡೆಯಲಿದೆ.















