ಮಂಗಳೂರು: ಕಳೆದ ಶುಕ್ರವಾರ ಮಂಗಳೂರು ಪತ್ರಕರ್ತರ ವತಿಯಿಂದ ಆಯೋಜಿಸಿದ್ದ ಚಾರ್ಮಾಡಿ ಅಧ್ಯಯನ ಪ್ರವಾಸದ ವೇಳೆ ಹೃದಯಾಘಾತದಿಂದ ನಿಧನರಾದ ಯುವ ಪತ್ರಕರ್ತ ಹೈಮದ್ ಹುಸೇನ್ ಅವರಿಗೆ ದ.ಕ.ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್  ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.pressclub (1)

ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದು ಸದಾ ಲವಲವಿಕೆಯಿಂದ ಇರುತ್ತಿದ್ದ ಹೈಮದ್ ಅವರ ಕುರಿತು ಮಾತನಾಡಿದ ಪತ್ರಕರ್ತರು ನುಡಿ ನಮನದೊಂದಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ  ಶ್ರೀನಿವಾಸ ಇಂದಾಜೆ, ಮಂಗಳೂರು ಪ್ರೆಸ್ಕ್ಲಬ್ನ ಪ್ರಧಾನ ಕಾರ್ಯದರ್ಶಿ  ಗುರುವಪ್ಪ ಎನ್.ಟಿ.ಬಾಳೇಪುಣಿ, ಜಿಲ್ಲಾ ವಾರ್ತಾ ಧಿಕಾರಿ ಬಿ.ಎ.ಖಾದರ್ ಶ್ಹಾ, ನಗರದ ಹಿರಿಯ ಪತ್ರಕರ್ತರುಗಳಾದ ಕೆ.ಆನಂದ ಶೆಟ್ಟಿ, ಸುರೇಶ್ ಬೆಳಗಜೆ, ಪಿ.ಬಿ ಹರೀಶ್ ರೈ, ಬಿ.ಎನ್ ಪುಷ್ಪರಾಜ್, ಬಿ.ರವೀಂದ್ರ ಶೆಟ್ಟಿ, ಮುಹಮ್ಮದ್ ಆರೀಫ್, ವೇಣುವಿನೋದ್ ಕೆ.ಎಸ್, ಆರ್.ಸಿ ಭಟ್, ಬಾಲಕೃಷ್ಣ ಎಂ.ಜಿ., ಹರ್ಷ ರಾವ್, ರವಿಪ್ರಸಾದ್ ಕಮಿಲ, ಸತ್ಯಾ ಕೆ, ಎಸ್.ವಿ ಸುಬ್ರಹ್ಮಣ್ಯ, ವಿಜಯ ಕೋಟ್ಯಾನ್ ಪಡು, ನರಸಿಂಹಮೂರ್ತಿ , ಪ್ರಕಾಶ್ ಪಾಂಡೇಶ್ವರ, ಕಲಾವಿದ ದಿನೇಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದು ಅಕಾಲಿಕವಾಗಿ ಅಗಲಿದ ಪತ್ರಕರ್ತ ಹುಸೇನ್ ಅವರಿಗೆ ಶ್ರದ್ಧಾಂಜಲಿ ಕೋರಿದರು.

By suddi9

Leave a Reply

Your email address will not be published. Required fields are marked *