ವಿಟ್ಲ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಧೀರ್ಗ ಕಾಲ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ವಸಂತಿ ಎನ್, ಶಶಿಕಲಾ ಪಿ ಕೆ, ಹಾಗೂ ಪದ್ಮರಾಜ ಚಿಂದೆ ಇವರ ಬೀಳ್ಕೊಡುಗೆ ಸಮಾರಂಭವು ಆಸ್ಪತ್ರೆಯಲ್ಲಿ 5-04-2016 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ| ಪ್ರಶಾಂತ ಬಿ ಎನ್, ಡಾ| ವೇದಾವತಿ, ಡಾ| ಸುಧಾಕರ್ ಶೆಟ್ಟಿ, ಇತರ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಪವಿತ್ರ ಸ್ವಾಗತಿಸಿದರು. ಎಲಿಯಮ್ಮ ವಂದಿಸಿದರು. ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು. ದೀಪಾ ಸಹಕರಿಸಿದರು

